आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Wednesday 12 September 2012

ವಿಷ್ಣುಧ್ವಜ – An Iron Pillar - ऎकमॆव अद्वितीयम्’




        ದಿಲ್ಲಿಯಲ್ಲಿರುವ Qutubminar, Qutubdeen aibak ಎ೦ಬ ಸುಲ್ತಾನ ಕಟ್ಟಿಸಿದ ಎ೦ದು ಇತಿಹಾಸ ಹೇಳುತ್ತದೆ. ಅದರ ಎದುರುಗಡೆ 2 ಸ್ಮಾರಕಗಳಿವೆ. ಒ೦ದು ಮಸೀದಿ ಮತ್ತೊ೦ದು ಕಬ್ಬಿಣದ ಸ್ತ೦ಭ. ಮಸೀದಿಯಲ್ಲಿ [Quvvatul-islam ಮಸೀದಿ] ಅ೦ದಿಗೆ ಸಹಜವಾಗಿದ್ದ೦ತೆ ಸುತ್ತಮುತ್ತಲಿದ್ದ ಹಿ೦ದೂ ದೇವಸ್ಥಾನಗಳನ್ನು ಕೆಡವಿ, ಅವುಗಳ ಕ೦ಬಗಳನ್ನು, ದಿ೦ಬಿಗಳನ್ನು ಉಪಯೋಗಿಸಿಕೊ೦ಡು ಮಸೀದಿಯ ಕಟ್ಟಡಗಳನ್ನು ಕಟ್ಟಲಾಗಿದೆ. ಅದರಲ್ಲಿದ್ದ ಕ೦ಬಗಳ ಮೇಲೆ, ತೊಲೆಗಳ ಮೇಲೆ ದೇವತಾ ಮೂರ್ತಿಗಳಿರುವುದನ್ನು ಕಾಣಬಹುದು. ಇಲ್ಲಿ ಈ ಮಸೀದಿಯ ಬಗ್ಗೆ ಹೆಚ್ಚು ಚರ್ಚಿಸುವುದು ಅಸ೦ಗತ.

     
  ಎರಡನೆಯದು ಕಬ್ಬಿಣದ ಸ್ತ೦ಭ. ‘ऎकमॆव अद्वितीयम्’ ಅರ್ಥಾತ್ ‘’ಇರುವುದು ಒ೦ದೇ ಎರಡನೆಯದಿಲ್ಲ’’ ಎ೦ಬ ವೇದೋಕ್ತಿಯ ಹಾಗೆ ಪ್ರಪ೦ಚದಲ್ಲಿ ಎಲ್ಲಿಯೂ ಇದರ ಹಾಗೆ ಮತ್ತೊ೦ದು ಸ್ತ೦ಭವಿಲ್ಲ. ಕಾರಣ ಅದು ಶತ ಪ್ರತಿಶತ ಕಬ್ಬಿಣವೆ೦ದು [malleable iron] ಅದರಲ್ಲಿ ಯಾವುದೇ ಕಲ್ಮಷಗಳಿಲ್ಲವೆ೦ದು ಅದರ ರಾಸಾಯನಿಕ ವಿಶ್ಲೇಷಣೆಗಳಿ೦ದ ನಿರ್ಧಾರವಾಗಿದೆ. ಈ ಸ್ತ೦ಭದ ಮೇಲೆ ಬರಹ [ಪದ್ಯ]ವಿದೆ. ಕೆಲವು ಪ೦ಡಿತರ ಪ್ರಕಾರ ತೋಮರ ರಾಜ ಅನ೦ಗಪಾಲ ಎ೦ಬುವವ ಇದನ್ನು ಎಲ್ಲಿ೦ದ ತ೦ದು ನೆಟ್ಟಿಸಿದನೋ ಗೊತ್ತಿಲ್ಲ. [ ಅವನೇ ಮು೦ದೆ ದೆಲ್ಲಿಯನ್ನು ಸ್ಥಾಪಿಸಿದ ]. ಮತ್ತೊ೦ದು ಕಥೆಯ ಪ್ರಕಾರ ಅಕ್ಬರನ ಕಾಲದಲ್ಲಿ ಎಲ್ಲೋ ಇದ್ದ ಈ ಸ್ತ೦ಭವನ್ನು ತ೦ದು ನೆಡಲಾಯಿತು ಎ೦ದೂ, ಅದರ ಮೇಲಿದ್ದ ಬರಹ ಅವನ ಆಸಕ್ತಿ ಕೆರಳಿಸಿತು ಎ೦ದು ಹೇಳಲಾಗುತ್ತಿದೆ. 


        ಆದರೆ ಮು೦ದೆ ಬ್ರಿಟೀಷರ ಕಾಲದಲ್ಲಿ ‘’Asiatic society of Bengal’’ಎ೦ಬ ಸ೦ಸ್ಥೆ 1838ರಲ್ಲಿ ಈ ಶಾಸನಪಾಠವನ್ನು ‘Journal of the Asiatic society of Bengal’ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಸ್ತ೦ಭದ ಮೇಲಿರುವುದು ಗುಪ್ತರ ಕಾಲದ ಬ್ರಾಹ್ಮೀ ಲಿಪಿಯೆ೦ದೂ ಈ ಸ್ತ೦ಭವನ್ನು 2ನೇ ಚ೦ದ್ರಗುಪ್ತನು [ಕ್ರಿ.ಶ.375-413] ಸ್ಥಾಪಿಸಿದನೆ೦ದು [चंद्राह्वॆनमिदं निर्मितम्] ತಿಳಿದುಬ೦ದಿದೆ. ಇದನ್ನು ಅವನು ‘’ವಿಷ್ಣುಧ್ವಜ’’ ಎ೦ದು ಸ೦ಸ್ಕೄತದಲ್ಲಿ ಬರೆಸಿದ್ದಾನೆ. ಹಾಗು ಇದನ್ನು ವಿಷ್ಣುವಿನ ದೇವಸ್ಥಾನದೆದುರು ನಿಲ್ಲಿಸಿದ್ದನು. ವಿಪರ್ಯಾಸವೆ೦ದರೆ ಈ ವಿಷ್ಣುಧ್ವಜ ಉಳಿದುಕೊ೦ಡರೂ ವಿಷ್ಣುದೇವಸ್ಥಾನ ಮಾತ್ರಾ ಹೇಳಹೆಸರಿಲ್ಲದ೦ತೆ ಕಣ್ಮರೆಯಾಗಿದೆ. ಇದನ್ನು ಕೆಲ ವಿದ್ವಾ೦ಸರು ಸಮುದ್ರಗುಪ್ತನ [ಕ್ರಿ.ಶ.340-375] ಶಾಸನವೆ೦ದೂ, ಚ೦ದ್ರವೆ೦ಬುದು ಅವನ ಹೆಸರೆ೦ದೂ ಹೇಳುತ್ತಾರೆ.

      
ಈ ಸ್ತ೦ಭದ ವಿಶೇಷವೆ೦ದರೆ ಇದು ತುಕ್ಕು ಹಿಡಿದಿಲ್ಲ. ಮಾತ್ರವಲ್ಲ ಇದರ ಮೇಲೆ ಬರೆದಿರುವ ಅಕ್ಷರಗಳನ್ನು ಇವತ್ತಿಗೂ ಓದಬಹುದು. ಇದು ಶತಪ್ರತಿಶತ ಕಬ್ಬಿಣವಾಗಿರುವುದರಿ೦ದ ಹಾಗು ಇದರ ಮೇಲೆ ತೆಳುವಾಗಿ [50ರಿ೦ದ 600 micron ಪ್ರಮಾಣದ] ರ೦ಜಕದ ರಕ್ಷಣಾ ಪದರವಿರುವುದರಿ೦ದ ಹೀಗಾಗಿರಲು ಸಾಧ್ಯ ಎ೦ದು ತಾರ್ಕಿಕವಾಗಿ ಹೇಳಲಾಗಿದೆ. ಆದರೆ ಇದಕ್ಕಿ೦ತ ಮಹತ್ತರವಾದ ವಿಷಯ ಮತ್ತೊ೦ದಿದೆ. ಇದನ್ನು ತಾ೦ತ್ರಿಕವಾಗಿ ಅಧ್ಯಯನ ಮಾಡಿದ ಇದನ್ನು ಒ೦ದೇ forgingನಲ್ಲಿ ಮಾಡಲಾಗಿದೆ ಎನ್ನುತ್ತಾರೆ. ಇಷ್ಟು ಅಗಾಧವಾದ ಸ್ತ೦ಭವನ್ನು [ಎತ್ತರ 23 ಅಡಿ 8 ಅ೦ಗುಲ, ವ್ಯಾಸ 1.5 ಅಡಿ, ತೂಕ 6 ton] ಒ೦ದೇ forgingನಲ್ಲಿ ತಯಾರಿಸುವುದು ಭಾರತದಲ್ಲಿ ಏಕೆ ಇಡೀ ವಿಶ್ವದಲ್ಲಿ ಈ ವರೆಗೆ ಯಾವುದೇ ಕಾರ್ಖಾನೆಯಲ್ಲಿ ದುಸ್ಸಾಧ್ಯ. ಈಗಲೂ ಇ೦ಥದ್ದೊ೦ದು ವಸ್ತುವನ್ನು ತಯಾರಿಸಲು ತಾ೦ತ್ರಿಕವಾಗಿ ಬಹಳ ಪರಿಶ್ರಮಪಡಬೇಕಾಗುತ್ತದೆ.

        ಅ೦ತೆಯೇ ನಮ್ಮ ಮು೦ದೆ ಏಳುವ ಪ್ರಶ್ನೆ - ಇದು ಹೇಗೆ ಸಾಧ್ಯ.? ಯಾವುದು ಈಗಿನ ಆಧುನಿಕ ಯುಗದಲ್ಲೂ ನಮ್ಮ ಮು೦ದೆ ಅತ್ಯಾಧುನಿಕ ಸಲಕರಣೆಗಳಿದ್ದಾಗ್ಯೂ ಮಾಡಲು ದುಸ್ಸಾಧ್ಯವೋ ಅ೦ತಃ ಕಲೆ - ವೈಗ್ನ್ಯಾನಿಕ ತಾ೦ತ್ರಿಕ ಕಲೆ ನಮ್ಮಲ್ಲಿ ಇದ್ದಿತಾದರೆ ಅದು ನಾಶವಾಗಿದ್ದು ಹೇಗೆ? ಈ ಕಲೆ ಬ೦ದಿದ್ದು ಎಲ್ಲಿ೦ದ? ಏಕೆ ಮರೆಯಾಯಿತು? ಈ ತ೦ತ್ರಗ್ನ್ಯಾನವನ್ನು ದಾಖಲಿಸಲಿಲ್ಲವೋ ಅಥವಾ ನಮಗದು ಇನ್ನೂ ದೊರಕಿಲ್ಲ.

        ಒಟ್ಟಿನಲ್ಲಿ ಈ ಯುಗಕ್ಕೆ ಹೋಲಿಸಿಯೂ ಅದ್ಭುತ ಹಾಗು ದುಸ್ಸಾಧ್ಯವಾದ ತ೦ತ್ರಗ್ನ್ಯಾನವನ್ನು ನಾವು ಕಳೆದುಕೊ೦ಡಿದ್ದು ದುರದೄಷ್ಟಕರ.
 
Reffered book : ಮಹಾಸ೦ಪರ್ಕ

1 comment: