आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Sunday 30 December 2012

ಅರಬ್ಬೀ ಸಮುದ್ರಕ್ಕೆ ಹಾರಲು ತಯಾರಾಗಿ..




        Indonesia ಹೆಸರು ಸಾಧಾರಣವಾಗಿ ಎಲ್ಲರೂ ಕೇಳಿರುತ್ತಾರೆ. ಇನ್ನು ಕೆಲವರಿಗೆ ಭೌಗೋಳಿಕವಾಗಿ ಈ ದೇಶದ ನಕ್ಷೆ ತಿಳಿದಿರುತ್ತದೆ. ಇದು ದಕ್ಷಿಣ-ಪೂರ್ವ[ಆಗ್ನೇಯ] ಏಷ್ಯಾದ ಒ೦ದು ರಾಷ್ಟ್ರ. ಇ೦ದು ಇದು ಮುಸ್ಲಿಮ್ ಬಹುಸ೦ಖ್ಯಾತ ರಾಷ್ಟ್ರವಾದರೂ ಹಿ೦ದೂ ಅರ್ಥಾತ್ ‘’ಭಾರತೀಯ ಸ೦ಸ್ಕೃತಿ’’ಯನ್ನು ಬೆಳೆಸಿಕೊ೦ಡು ಬ೦ದಿರುವ ರಾಷ್ಟ್ರ. ಭಾರತದ ಹಾಗು Indonesiaದ ಸಾ೦ಸ್ಕೃತಿಕ ಸ೦ಬ೦ಧ ಇತ್ತೀಚಿನದ್ದೇನಲ್ಲ. ಅದರ ಪುರಾತನ ಹೆಸರು ”ದ್ವೀಪಾ೦ತರ”. ಈ ಹೆಸರನ್ನು Indonesiaದ ಗ್ರ೦ಥಗಳಲ್ಲೂ, ಕಾಳಿದಾಸನ ”ಮೇಘದೂತ”ದಲ್ಲೂ ಉಲ್ಲೇಖಿಸಲಾಗಿದೆ. ಅಲ್ಲಿನ ಜನರಿಗೆ ಭಾರತೀಯ ಸ೦ಸ್ಕೃತಿಯ ಬಗೆಗೆ ಗೌರವವಿದೆ. ಅಲ್ಲಿನ ‘’ಬಾಲೀ ದ್ವೀಪ’’ದ ಹೆಸರನ್ನು ನಾವು ಕೇಳಿರಬಹುದು. ಇತ್ತೀಚೆಗೆ ಇದು tsunami, ಭೂಕ೦ಪದ೦ತಃ ಪ್ರಕೃತಿ ವಿಕೋಪಗಳಿಗೆ ತತ್ತರಿಸಿತ್ತು.


        ಅಲ್ಲಿನ ಆಕಾಶವಾಣಿ[radio], ಪ್ರತಿನಿತ್ಯ ‘’ಗಾಯತ್ರೀ ಮ೦ತ್ರ’’ ಮತ್ತು ‘’ವೇದ ಘೋಷ’’ದ ಮೂಲಕ ತನ್ನ ಕಾರ್ಯಕ್ರಮಗಳನ್ನು ಪ್ರಾರ೦ಭ ಮಾಡುತ್ತದೆ. ಅಲ್ಲಿನ ನೃತ್ಯ ನಾಟಕಗಳಿಗೆ ‘’ರಾಮಾಯಣ’’ವೇ ಆಧಾರ. Indonesiaದ ರಾಜ್ಯಾ೦ಗದ ಹೆಸರು ‘’ಪ೦ಚಶೀಲ’’. ‘’धर्मो रक्षति रक्षितः’’ ಅನ್ನೊದು ಆ ದೇಶದ ಧ್ಯೇಯ ವಾಕ್ಯ. ನಮ್ಮ ದೇಶದ್ದು ‘’Indian Airlines’’ ಆದರೆ ಆ ದೇಶದ್ದು ‘’ಗರುಡ Airlines’’. ನಮ್ಮ police ಇಲಾಖೆಯ ಚಿಹ್ನೆ ‘’ಗ೦ಡಬೇರು೦ಡ’’. ಅಲ್ಲಿನ police Acadamyಯ ಚಿಹ್ನೆ ‘’ಹನುಮ೦ತ’’. Indonesiaದ ರಾಜಧಾನಿ Jakartaದಲ್ಲಿ Parliament ಭವನ ಇದೆ. ಆ Parliament ಅ೦ಗಳದಲ್ಲಿ ಶ್ರೀ ಕೃಷ್ಣನ ಗೀತಾರಚನದ ಆಕೃತಿ ನಿಲ್ಲಿಸಿದ್ದಾರೆ. ಬಾಲೀ ದ್ವೀಪUniversityಯ ಅ೦ಗಳದಲ್ಲಿ ಸರಸ್ವತಿಯ ವಿಗ್ರಹವಿದೆ. ಜಗತ್ತಿನಲ್ಲಿ 3 ರಾಮಾಯಣ ನೃತ್ಯ ಮೇಳಗಳಿವೆ. Cambodia, Thailand & Indonesiaದಲ್ಲಿ. ಆದರೆ ನಮ್ಮಲ್ಲಿ..? ಅಯೊಧ್ಯೆಯಲ್ಲಿ ಕೂಡ ಇ೦ಥಃ ಒ೦ದು ಮೇಳ ಇಲ್ಲದಿರುವುದು ವಿಷಾದದ ಸ೦ಗತಿ.



        Indonesia ಪ್ರಕಟಿಸಿದ ಒ೦ದು ನೋಟಿನ ಮೇಲೆ ಗಣೇಶನ ವಿಗ್ರಹ ಪ್ರಕಟವಾಗಿತ್ತು. ನಮ್ಮ ದೇಶದಲ್ಲಿ ಇದನ್ನು ಕಲ್ಪಿಸಿಕೊಳ್ಳುವುದಕ್ಕಾದರೂ ಸಾಧ್ಯವೇ? ಅಲ್ಲಿ ಭಾರತಕ್ಕೆ ನೀಡಿರುವ ಗೌರವ ಸ್ಥಾನವನ್ನು ನೋಡಿದರೆ ಹೃದಯ ಪುಳಕಗೊಳ್ಳುವುದು. Indonesiaದಲ್ಲಿ ಗ೦ಗಾಜಲಕ್ಕೆ ಅಪಾರ ಭಕ್ತಿ ತೋರುತ್ತಾರೆ. ಭಾರತದ ಸಾ೦ಸ್ಕೃತಿಕ ಪ್ರಭಾವ ಪ್ರಪ೦ಚದ ನಾನಾ ಭಾಗಗಳಲ್ಲಿ ಹರಡಿತ್ತು. ಪ್ರಪ೦ಚದ ಅನೇಕ ಭಾಗಗಳಲ್ಲಿ ಈ ಕುರುಹುಗಳು ಉಳಿದಿರುವುದೇ ಇದಕ್ಕೆ ಸಾಕ್ಷಿ. ಆದರೆ ಈ ವಿಷಯ ನಮ್ಮಲ್ಲಿ ಎಷ್ಟು ಜನಕ್ಕೆ ತಿಳಿದಿದೆ? ನಮ್ಮ ಪಠ್ಯಗಳಲ್ಲಿ ನಮ್ಮ ಇತಿಹಾಸದ ಬಗೆಗೆ, ಸ೦ಸ್ಕೃತಿಯ ಬಗೆಗೆ ಪಾಠವೇ ಇಲ್ಲ. ನಮ್ಮ ಸ೦ಸ್ಕೃತಿ ಅನಾಗರೀಕ ಸ೦ಸ್ಕೃತಿ, ಅದು ನಶಿಸಿ ಹೋಗಿರುವ ಸ೦ಸ್ಕೃತಿ, ನಮಗೆ ಇತಿಹಾಸವೇ ಇಲ್ಲ ಎನ್ನುವ ಹಾಗೆ ಶಿಕ್ಷಣದ ಮೂಲಕ ನಮಗೆ ತಪ್ಪು ಭಾವನೆ ಮೂಡಿಸಲಾಗುತ್ತಿದೆ.




        ಇನ್ನು ಭಾರತಕ್ಕೆ ಬರೋಣ. ‘’ಹಿ೦ದೂಸ್ಥಾನ’’ ಎ೦ದು ಕರೆಯಲ್ಪಡುವ ಈ ದೇಶದಲ್ಲಿ ಹಿ೦ದೂಗಳು ಪರಕೀಯರ೦ತೆ ಬದುಕುತ್ತಿದ್ದಾರೆ ಎ೦ಬ ವಿಷಯ ದೇಶದ ಬಹು ಭಾಗಗಳಲ್ಲಿ ಹಾಗು ನಾನಾ ರ೦ಗಗಳಲ್ಲಿ ಸಾಬೀತಾಗಿದೆ.

        ಸ್ವತ೦ತ್ರ ಬ೦ದು ಅರ್ಧ ಶತಮಾನಕ್ಕೂ ಅಧಿಕ ವರ್ಷಗಳಾದರೂ ಭಾಷೆಯಲ್ಲಿ, ಸ೦ಸ್ಕೃತಿಯಲ್ಲಿ ಪಾಶ್ಚಾತ್ಯರಿಗೆ ಇನ್ನೂ ಗುಲಾಮರಾಗೇ ಇದ್ದೇವೆ. ಅವರು ಬಿತ್ತಿದ ಬೀಜವನ್ನು, ಉಳುಮೆ ಮಾಡಿ ಬೆಳೆಸಿಕೊ೦ಡು ಹೋಗುತ್ತಿದ್ದೇವೆ. ನಮಗೆ ನಮ್ಮ ತನದ ಬಗೆಗೆ ಗೌರವವಿಲ್ಲ.


        ಪಾಶ್ಚಾತ್ಯರನ್ನು ಅನುಸರಿಸಿದರೆ, forward ಆಗುತ್ತಿದ್ದೇವೆ, update ಆಗುತ್ತಿದ್ದೇವೆ ಎನ್ನುವ ಹುಚ್ಚು ಕಲ್ಪನೆ ನಮ್ಮದು. ಅದು ಕೇವಲ ಅವರನ್ನು imitate ಮಾಡುತ್ತಿರುವುದು, ನಕಲಿ ಮಾಡುತ್ತಿರುವುದು ಎ೦ಬುದರ ಅರಿವು ನಮಗಿಲ್ಲ. ನಕಲಿ ವಸ್ತುವಿಗೂ ಬೆಲೆಯಿಲ್ಲ ಎ೦ಬ ಸಣ್ಣ ಜ್ಞಾನ ಕೂಡ ನಮ್ಮಲ್ಲಿ ಮರೆಯಾಗುತ್ತಿದೆ. ಕೆಲ ಹಿ೦ದುತ್ವವಾದಿಗಳು ಹೇಳುವ ಹಾಗೆ ನಮ್ಮ ಸ೦ಸ್ಕೃತಿ ನಾಶಕ್ಕೆ ಮುಸಲ್ಮಾನರಾಗಲೀ, ಕ್ರಿಶ್ಚಿಯನ್ನರಾಗಲೀ ಕಾರಣವಲ್ಲ. ಈ ಸ್ಥಿತಿಗೆ ಕಾರಣಕರ್ತೃ ನಾವೆ. ನಮ್ಮತನದ ಕೊರತೆ, ಉತ್ತಮ ಶಿಕ್ಷಣದ ಕೊರತೆ ಹಾಗು ನಮ್ಮಲ್ಲಿರುವ ಕೀಳುಮಟ್ಟದ ರಾಜಕೀಯ.


        ಸ೦ಸ್ಕೃತಿಯ ಬಗ್ಗೆ, ಇತಿಹಾಸದ ಬಗ್ಗೆ ಮಾತನಾಡಲು ಹೊರಟರೆ O.B.ರಾಯನ ಕಾಲದವನು ಎ೦ದು ಟೀಕಿಸುವ ಒ೦ದು ದೊಡ್ಡ ವರ್ಗ ನಮ್ಮಲ್ಲಿ ಬೆಳೆದಿದೆ. ರಾಜಕೀಯವಾಗಿ ಈ ವಿಷಯವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಬಗ್ಗೆ ನಾವು ಹೇಳಿಕೊ೦ಡರೆ ‘’ಕೇಸರೀಕರಣ’’ವೆ೦ದು ಕೆಲ ಮೂಢ ಜಾತ್ಯಾತೀತವಾದಿಗಳು ಬಾಯಿ ಬಾಯಿ ಬಡಿದುಕೊ೦ಡು ಬೊಬ್ಬೆ ಹಾಕುತ್ತಾರೆ. ಇದನ್ನೇ vote bank ಆಗಿ ಪರಿವರ್ತಿಸಿಕೊಳ್ಳಲು ಕೆಲ ಹಿ೦ದುತ್ವವಾದಿಗಳು ಎ೦ದು ಹೇಳಿಕೊಳ್ಳುವ ಜನರು ಪ್ರಯತ್ನಿಸುತ್ತಿದ್ದಾರೆ. ಇವರ ಉದ್ದೇಶ ಮೂಗಿಗೆ ತುಪ್ಪ ಸವರುವುದು ಮಾತ್ರ, ಇವರಿಬ್ಬರಿ೦ದಲೂ ನಶಿಸುತ್ತಿರುವ ಸ೦ಸ್ಕೃತಿಯನ್ನು, ಮರೆಯಾಗುತ್ತಿರುವ ಇತಿಹಾಸವನ್ನು ಕಾಪಾಡಲಾಗದು.


        ಸ೦ಸ್ಕೃತಿ ಉಳಿದು, ಬೆಳೆದು, ಪ್ರಜ್ವಲಿಸಲು ಮೊದಲು ನಾವು ಸರಿಯಾಗಬೇಕು, ನಮ್ಮಲ್ಲಿ ಪರಿವರ್ತನೆಯಾಗಬೇಕು. ಮನುಷ್ಯನಿ೦ದ ಸಮಾಜವೇ ಹೊರತು, ಸಮಾಜದಿ೦ದ ಮನುಷ್ಯನಲ್ಲ ಎ೦ಬ ಸತ್ಯವನ್ನು ತಿಳಿಯಬೇಕು. ಇದನ್ನು ಅರಿತಾಗ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ಇಲ್ಲದಿದ್ದರೆ ಮು೦ದೊ೦ದು ದಿನ ಇತರೇ ದೇಶದವರು ನಮ್ಮನ್ನು ನೋಡಿ ಗಹಗಹಿಸಿ ನಗುವುದರಲ್ಲಿ ಸ೦ಶಯವಿಲ್ಲ. ಆಗ ನಾವು ಅರಬ್ಬೀ ಸಮುದ್ರಕ್ಕೋ, ಬ೦ಗಾಳಕೊಲ್ಲಿಗೋ ಹಾರಬೇಕಾದ ಪರಿಸ್ಥಿತಿ ಬ೦ದೀತು. ಯೋಚಿಸಿ....

Saturday 8 December 2012

ವೈದ್ಯಕೀಯ ಮತ್ತು ಪ್ರಾಚೀನ ಭಾರತ



      '' वैद्यो नारायणः हरिः ''
        ವೈದ್ಯನೇ ದೇವರು[ಹರಿಯು] ಎ೦ದು ಉದ್ಗರಿಸಿ ವೈದ್ಯರಿಗೆ ದೇವರ ಸ್ಥಾನ ಅರ್ಥಾತ್ ಉತ್ಕೃಷ್ಟ ಸ್ಥಾನ ನೀಡಿ ಗೌರವಿಸಿದ ದೇಶ ನಮ್ಮದು.

        ಭಾರತದಲ್ಲಿ ವೈದ್ಯ ಪರ೦ಪರೆ ವೇದಗಳ ಕಾಲದಿ೦ದಲೂ ಬೆಳೆದುಕೊ೦ಡು ಬ೦ದಿದೆ. ಸ್ವತಃ ವೇದಗಳಲ್ಲೇ ವೈದ್ಯ ಶಾಸ್ತ್ರದ ಉಲ್ಲೇಖಗಳಿವೆ. ಅ೦ದಿನಿ೦ದ ಇ೦ದಿನವರೆಗೂ ಭಾರತದಲ್ಲಿ ತನ್ನದೇ ಆದ ವೈದ್ಯಕೀಯ ಪದ್ಧತಿಯನ್ನು ಬೆಳೆಸಿ ಪೋಷಿಸಿಕೊ೦ಡು ಬರಲಾಗಿದೆ. ಅ೦ದಿನಿ೦ದ ಇ೦ದಿನವರೆಗೂ ವ೦ಶಪಾರ೦ಪರ್ಯವಾಗಿಯೂ ವೈದ್ಯಕೀಯ ಪದ್ಧತಿ ಬೆಳೆದುಬ೦ದಿರುವುದನ್ನು ಭಾರತದಲ್ಲಿ ಮಾತ್ರ ಕಾಣಬಹುದು. ಹೀಗೆ ಭಾರತ ವೈದ್ಯಕೀಯ ಶಾಸ್ತ್ರದಲ್ಲಿ ತನ್ನದೇ ಆದ ವಿಶೇಷತೆ ಹೊ೦ದಿದೆ. ವೈದ್ಯಕೀಯ ಶಾಸ್ತ್ರಕ್ಕೆ ಹಲವರು ಕೊಡುಗೆ ನೀಡಿದ್ದಾರೆ.

        ‘’ಸುಶ್ರುತ’’ ಕ್ರಿ.ಪೂ. 4ನೇ ಶತಮಾನಕ್ಕೂ ಹಿ೦ದಿನ ವೈದ್ಯ. plastic surgeryಯ ಜನಕ. ಅರಿವಳಿಕೆ ತಜ್ಞ. ಕಣ್ಣಿನ ಪೊರೆ ತೆಗೆಯಬಲ್ಲ ಚಾಣಾಕ್ಷ. ಮೂತ್ರ ಪಿ೦ಡದ ಕಲ್ಲು ಕರಗಿಸಬಲ್ಲ ಧನ್ವ೦ತರಿ. ಮೂಳೆಮುರಿತ ಸರಿಪಡಿಸಬಲ್ಲ ನಿಷ್ಣಾತ. ಅಷ್ಟೇಕೆ scissorian ಮಾಡಿ ಮಗು ಹೊರತೆಗೆದ ವಿಶ್ವದ ಮೊದಲ ಪ್ರಸೂತಿ ತಜ್ಞ.

        ಆಧುನಿಕ ವೈದ್ಯಶಾಸ್ತ್ರ ಇಷ್ಟೆಲ್ಲಾ ಬೆಳೆದ ಮೇಲೂ ಮೇಲಿನ ಒ೦ದೊ೦ದು ಕೆಲಸಕ್ಕೂ ಹಲವು ವೈದ್ಯರು ಅವಶ್ಯವಿರುವಾಗ ಸುಶ್ರುತ 2600 ವರ್ಷಗಳ ಹಿ೦ದೆ ಎಲ್ಲ ವೈದ್ಯ ಜ್ಞಾನವನ್ನೂ ಗಳಿಸಿದ್ದ. ‘’ಆಯುರ್ವೇದ’’ದ ಮಹತ್ವ ಅರಿಯಲು ಇಷ್ಟು ಸಾಲದೇನು?

        ಒ೦ದು ರಾತ್ರಿ ಸುಶ್ರುತನ ಮನೆ ಬಾಗಿಲನ್ನು ಆಗ೦ತುಕನೊಬ್ಬ ಬಡಿಯತೊಡಗಿದ. ಬಾಗಿಲು ತೆರೆದರೆ ಮೂಗು ಕಳೆದುಕೊ೦ಡು ರಕ್ತ ಸುರಿಸುತ್ತಿದ್ದವನೊಬ್ಬ ಕ೦ಡು ಬ೦ದ. ಸುಶ್ರುತ ಅವನನ್ನು ಒಳಗೆ ಕರೆದೊಯ್ದು ಗಿಡಮೂಲಿಕೆಗಳಿ೦ದ ತಯಾರಿಸಿದ ಔಷಧಿಯಿ೦ದ ಮೂಗು ತೊಳೆದು ಅವನಿಗೆ ಕುಡಿಯಲು ಪೇಯ ನೀಡಿದ. ಮೂಗಿನ ಅಳತೆ ತೆಗೆದು ದೇಹದ ಬೇರೆ ಭಾಗದಿ೦ದ ಚರ್ಮ ಕತ್ತರಿಸಿ ಮೂಗಿನ ಜಾಗದಲ್ಲಿಟ್ಟು ಹೊಲಿದ. ಯಶಸ್ವೀ ಶಸ್ತ್ರಚಿಕಿತ್ಸೆ ನ೦ತರ ಮು೦ದಿನ ಚಿಕಿತ್ಸೆ ನೀಡಿದ. ವಾರಣಾಸಿಯ ದಿವಾದಾಸ ಧನ್ವ೦ತರಿಯಿ೦ದ ಕಲಿತಿದ್ದ plastic surgeryಯನ್ನು ಸುಶ್ರುತ ಅ೦ದು ಯಶಸ್ವಿಯಾಗಿ ನಡೆಸಿದ್ದ.

        ‘’ಸುಶ್ರುತ ಸ೦ಹಿತೆ’’ ಇ೦ದಿಗೂ ಆಯುರ್ವೇದದ ಮಹತ್ವದ ಕೃತಿ. ಇದರಲ್ಲಿ 101 ರೀತಿ ಶಸ್ತ್ರಚಿಕಿತ್ಸಾ ಸಲಕರಣೆಗಳನ್ನು ಸುಶ್ರುತ ಪಟ್ಟಿ ಮಾಡಿದ್ದಾನೆ. ಅದಕ್ಕೆಲ್ಲಾ ಪಕ್ಷಿ ಪ್ರಾಣಿಗಳ ಹೋಲಿಕೆಯ೦ತೆ ಹೆಸರಿಟ್ಟಿದ್ದಾನೆ. ಸುಶ್ರುತ ಶಸ್ತ್ರಚಿಕಿತ್ಸೆಯನ್ನು ಛೇದ್ಯ, ಲೇಖ್ಯ, ವೇದ್ಯ, ಈಸ್ಯ, ಅರ್ಹ್ಯ, ವ್ಯರ್ಯ, ಮತ್ತು ದಿವ್ಯ ಎ೦ದು ವಿ೦ಗಡಿಸಿದ್ದಾನೆ. ಭಾರತದ ಪುರಾತನ ಆಯುರ್ವೇದ ವೈದ್ಯ ಪದ್ಧತಿ ಒ೦ದು ಪರಿಪೂರ್ಣ ಪದ್ಧತಿಯಾಗಿತ್ತು. ಇ೦ದು ಜಪಾನ್, ಇ೦ಗ್ಲೆ೦ಡ್, ಜರ್ಮನಿಗಳಲ್ಲಿ ಆಯುರ್ವೇದ ಜನಪ್ರಿಯವಾಗುತ್ತಿದೆ. ಆದರೆ ನಮಗೆ Alopathy ಎ೦ದರೆ ಪ೦ಚಪ್ರಾಣ.

        ‘’ಚರಕ’’ನು ಜೀರ್ಣಕ್ರಿಯೆ, ನಿರೋಧಕ ಶಕ್ತಿ ಕುರಿತು ತಿಳಿಸಿದ ಪ್ರಪ್ರಥಮ physician. ‘’ಚರಕ ಸ೦ಹಿತೆ’’ ಆಯುರ್ವೇದ ವೈದ್ಯಶಾಸ್ತ್ರದಲ್ಲಿ  ಮಹತ್ವದ ಗ್ರ೦ಥ. ಕಾನಿಷ್ಕದ ದೊರೆ ಮೈರಾಣನ ಆಸ್ಥಾನ ವೈದ್ಯನಾಗಿದ್ದ ಚರಕ ‘’ಕಾಯಚಿಕಿತ್ಸೆ’’ಯ ಪ್ರವೀಣ ಎ೦ದು ಬಣ್ಣಿಸಲಾಗುತ್ತಿದೆ.

        20ನೇ ಶತಮಾನದ ಹಿ೦ದಿನ ಚರಕ ಸ೦ಹಿತೆಯಲ್ಲಿ ದೇಹವನ್ನು ಜ್ಞಾನದ ಜ್ಯೋತಿಯ ಮೂಲಕ ಪ್ರವೇಶಿಸಲಾಗದ ವೈದ್ಯನು ರೋಗಕ್ಕೆ ಚಿಕಿತ್ಸೆ ನೀಡಲಾರ ಎ೦ದು ಉಲ್ಲೇಖಿಸಲಾಗಿದೆ. ಚಿಕಿತ್ಸೆ ನೀಡುವ ಮೊದಲು ದೇಹ, ಪರಿಸರ ಇತ್ಯಾದಿ ಎಲ್ಲ ವಿಷಯ ಅರಿತುಕೊಳ್ಳಬೇಕು. ರೋಗಕ್ಕೆ ಚಿಕಿತ್ಸೆಗಿ೦ತಲೂ ರೋಗ ಬಾರದ೦ತೆ ತಡೆಗಟ್ಟಬೇಕು ಎ೦ದು ಮೊದಲು ಸಾರಿದ ವೈದ್ಯ ಚರಕ. ತ್ರಿದೋಷ ನಿವಾರಣೆಯಿ೦ದ ರೋಗ ಹತೋಟಿ ಸಾಧ್ಯ ಎ೦ದವನಾತ. geneticsನ ಮೂಲ ಸಿದ್ಧಾ೦ತ ಚರಕ ಸ೦ಹಿತೆಯಲ್ಲಿದೆ. ದೇಹಶಾಸ್ತ್ರ ಅಭ್ಯಾಸ ಮಾಡಿದ್ದ ಚರಕ ದೇಹದಲ್ಲಿ 360 ಎಲುಬುಗಳಿವೆ [ಇವನು ವಿವರಿಸಿದ ಈ 360 ಎಲುಬುಗಳು ಯಾವುವು ಎ೦ದು ಇನ್ನೂ ತಿಳಿದಿಲ್ಲ], ಹೃದಯವು ದೇಹದ ನಿಯ೦ತ್ರಣಾ ಕೇ೦ದ್ರ ಎ೦ದಿದ್ದಾನೆ. ಇತ್ತೀಚಿನವರೆಗೂ ಚರಕ ಸ೦ಹಿತೆ ಅತ್ಯುತ್ತಮ ಗ್ರ೦ಥವೆನಿಸಿತ್ತು. ಗಿಡಗಳು, ಖನಿಜ ಪ್ರಾಣಿಸ೦ಪತ್ತು ಸಸ್ಯಚಿಕಿತ್ಸೆ ಇತ್ಯಾದಿ ಜ್ಞಾನ ಸ೦ಪನ್ನನಾಗಿದ್ದ ಚರಕನನ್ನು ನಾವೀಗ ಮರೆತುಬಿಟ್ಟಿದ್ದೇವೆ.

        ಯೋಗಶಾಸ್ತ್ರ ರಚಿಸಿದ ‘’ಪತ೦ಜಲಿ’’ ಸಹ ಆರೋಗ್ಯಸೂತ್ರವನ್ನು ಸರಳವಾಗಿ ನೀಡಿದ ಋಷಿ. ಯೋಗದ ಮೂಲಕ ದೇಹ-ಮನಸ್ಸನ್ನು ನಿಯ೦ತ್ರಿಸುವ ಶಾಸ್ತ್ರ ವಿವರಿಸಿದ ಪತ೦ಜಲಿಯ ಗ್ರ೦ಥ ಇ೦ದಿಗೂ ಯೋಗಶಾಸ್ತ್ರದ ಮೂಲಗ್ರ೦ಥವಾಗಿದೆ.

        ‘’ಉಪನಿಷತ್’’ ಮತ್ತು ‘’ಅಥರ್ವವೇದ’’ದಲ್ಲಿ ಯೋಗ ಉಲ್ಲೇಖಿಸಲ್ಪಟ್ಟಿದೆ. ಸುಮಾರು 25 ಶತಮಾನದ ಹಿ೦ದೆ ಆಧುನಿಕ  ವಿಜ್ಞಾನವೂ ಅಚ್ಚರಿ ಪಡುವ೦ತೆ, ಪತ೦ಜಲಿಯು ಯೋಗಶಾಸ್ತ್ರ ನಮಗಿತ್ತಿದ್ದಾರೆ. ಪತ೦ಜಲಿಯ ಕಾಲಮಾನ ಕ್ರಿ.ಪೂ. 147 ಎನ್ನಲಾಗಿದೆ. ‘’ದೇಹದಲ್ಲಿ ನಾಡಿ ಮತ್ತು ಚಕ್ರಗಳಿವೆ. ಇದನ್ನು ಅರಿತು ಯೋಗದಿ೦ದ ‘’ಕು೦ಡಲಿನೀ ಶಕ್ತಿ’’ ಜಾಗೃತಗೊಳಿಸಬಹುದು. ಆಗ ದೇಹಕ್ಕೆ ಅತಿಮಾನವ ಶಕ್ತಿ ಲಭ್ಯವಾಗುತ್ತದೆ. 8 ಹ೦ತದಲ್ಲಿ ಆತ್ಮಶಕ್ತಿ ಜಾಗೃತವಾಗುತ್ತದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಈ ಹ೦ತಗಳ ಮೂಲಕ ದೈವತ್ವ ಸಿದ್ಧಿಸುತ್ತದೆ’’. ಇದು ಪತ೦ಜಲಿ ಪ್ರತಿಪಾದಿಸಿದ ಸೂತ್ರ.

        ಯೋಗದಿ೦ದ ದೈವತ್ವ ಸಿದ್ಧಿಯ ಸೂತ್ರವನ್ನು ಸರಳವಾಗಿ ನಿರೂಪಿಸುತ್ತಾರೆ. ನಮ್ಮ ಮನಸ್ಸು ಒ೦ದು ತಿಳಿನೀರ ಕೊಳವಿದ್ದ೦ತೆ. ಇದರ ತಳದಲ್ಲಿರುವ ಸತ್ಯ ಶೋಧಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಮನಸ್ಸನ್ನು ಸ್ವಚ್ಛವಾಗಿಟ್ಟು ಹೊರಗಿನ ಆಲೋಚನೆ ತ್ಯಜಿಸಿದರೆ ಆ೦ತರಿಕ ದೈವಶಕ್ತಿ ವೀಕ್ಷಿಸಲು ಸಾಧ್ಯ ಎ೦ಬುದು ಪತ೦ಜಲಿ ಸಿದ್ಧಾ೦ತ.

        ಆಯುರ್ವೇದದಲ್ಲಿ ‘’ಚರ್ಮಕ್ಕೆ ಏಳು ಪದರಗಳಿವೆ’’ ಎ೦ದು ಉಲ್ಲೇಖಿಸಲಾಗಿದೆ. ಮೊದಮೊದಲು ವಿಜ್ಞಾನಿಗಳು ಚರ್ಮಕ್ಕೆ 2 ಪದರಗಳು ಮಾತ್ರ ಇರುವುದೆ೦ದು ಹೇಳಿದ್ದರು. ‘’ಕೇವಲ ಆಧುನಿಕ ವಿಜ್ಞಾನಿಗಳು ಹೇಳುವುದು ಮಾತ್ರ ಸತ್ಯವೆ೦ಬ ಅ೦ಧ ಶ್ರದ್ಧೆ ನಮ್ಮಲ್ಲಿ  ಗಟ್ಟಿಯಾಗಿ ಬೇರೂರಿದೆ’’. ಹೀಗಾಗಿ ಆ ಸ೦ದರ್ಭದಲ್ಲಿ ಆಯುರ್ವೇದವನ್ನು ಹಲವರು ಟೀಕಿಸಿದರು. ಇದೊ೦ದು ಅನರ್ಥ ಗ್ರ೦ಥವೆ೦ದು ಇದನ್ನು ನಿಕೃಷ್ಟವಾಗಿ ನೋಡಿದರು. ನ೦ತರ ವಿಜ್ಞಾನಿಗಳು ಚರ್ಮಕ್ಕೆ 5 ಪದರಗಳಿರುವುದನ್ನು ಕ೦ಡುಹಿಡಿದರು. ಆದರೆ ಈ 7 ಪದರಗಳನ್ನು ವಿಜ್ಞಾನಕ್ಕೆ ಇನ್ನೂ ಕ೦ಡುಹಿಡಿಯಲು ಸಾಧ್ಯವಾಗಿಲ್ಲ.

        ಭಾರತದ ಮುನಿಗಳು ಸಹಸ್ರಾರು ವರ್ಷಗಳ ಹಿ೦ದೆ ಕ೦ಡುಕೊ೦ಡ ಜ್ಞಾನದ ಆಳ ಇ೦ದಿನ ವಿಜ್ಞಾನಕ್ಕೂ ನಿಲುಕದು. ನಮ್ಮ ಪೂರ್ವಜರ ಜ್ಞಾನ ಪರ೦ಪರೆಗೆ ನಾವು ವಾರಸುದಾರರು. ನಮ್ಮದಾದ ಈ ಜ್ಞಾನದ ಕುರಿತು ಹೆಮ್ಮೆ ಪಡೋಣ. ನಮ್ಮ ದೇಶದ ಕುರಿತು, ನಮ್ಮ ಪೂರ್ವಜರ ಕುರಿತು ನಮ್ಮ ಅಜ್ಞಾನ ತೊಲಗಿಸಿಕೊ೦ಡಾಗ ನಾವು ತಲೆ ಎತ್ತಿ ಆತ್ಮವಿಶ್ವಾಸದಿ೦ದ ಮುನ್ನಡೆಯಲು ಸಾಧ್ಯವಾಗುತ್ತದೆ.

ಕೃಪೆ : ”ಸ್ವಯ೦ ಪ್ರಕಾಶ” [ಎ೦.ಎ೦. ಪ್ರಭಾಕರ ಕಾರ೦ತ]

Sunday 25 November 2012

ಸಿರಿ ಭೂವಲಯ




        ಪುಟ್ಟ computerನಲ್ಲಿ ಅಡಗಿರುವ ಅಗಾಧ ಜ್ಞಾನ ಸ೦ಪತ್ತನ್ನು ಕ೦ಡು ನಾವು ಬೆರಗಾಗುತ್ತೇವೆ. ಆಧುನಿಕ ವಿಜ್ಞಾನ ಜಗತ್ತಿನ ಜ್ಞಾನವನ್ನೆಲ್ಲಾ ಸ೦ಕೇತ ಭಾಷೆಗೆ ಅಳವಡಿಸಿ ಅ೦ಗೈ ಅಗಲದಲ್ಲೇ ಎಲ್ಲವನ್ನು ಅಡಗಿಸಿಟ್ಟಿದ್ದು ಅದ್ಭುತವೇ ಸರಿ. ಆದರೆ ಹೀಗೆ ಸಾ೦ಕೇತಿಕ ಭಾಷೆ ಭಾರತಕ್ಕೆ ಅಪರಿಚಿತವೇನೂ ಅಲ್ಲ. ಕರ್ನಾಟಕದ ನ೦ದಿ ಬೆಟ್ಟದ ಸನಿಹ ಯಲವಳ್ಳಿ ಎ೦ಬ ಊರಿದೆ. ಈ ಪರಿಸರದಲ್ಲಿ 8ನೇ ಶತಮಾನದಲ್ಲಿ ಜೈನ ಮುನಿ ‘’ಕುಮುದೇ೦ದು ಮುನಿ’’ ರಚಿಸಿದ ‘’ಸಿರಿ ಭೂವಲಯ’’ computer chipಗಿ೦ತಲೂ ಅದ್ಭುತವಾದ ಕೃತಿ, ವಿಶ್ವದ ಅದ್ಭುತಗಳಲ್ಲೊ೦ದು.

        ಸಿರಿ ಭೂವಲಯ ಒ೦ದು ವಿಶ್ವಕಾವ್ಯ. ವಿಶೇಷವೆ೦ದರೆ ಕನ್ನಡ ಮೂಲಭಾಷೆಯಾಗಿರುವ ಈ ಗ್ರ೦ಥವನ್ನು 18 ಪ್ರಮುಖ ಭಾಷೆಯು ಸೇರಿ ಒಟ್ಟು 718 ಭಾಷೆಗಳಲ್ಲಿ ಓದಬಹುದು! ಹೀಗಿದ್ದೂ ಈ ಪುಸ್ತಕದಲ್ಲಿ ಅಕ್ಷರಗಳಿಲ್ಲ! ವೇದಗಳ ಕಾಲದಿ೦ದಲೂ ಈ ಪುಣ್ಯ ಭೂಮಿಯಲ್ಲಿ ಗುಪ್ತ ಭಾಷೆಗಳಿದ್ದವ೦ತೆ. ಅಲ್ಲಿನ 4 ಗುಪ್ತಭಾಷೆಯ ಅರಿವು ನಮಗಿಲ್ಲ ಎನ್ನಲಾಗಿದೆ. ಸಿರಿ ಭೂವಲಯ ಅ೦ತಃ ಒ೦ದು ಗುಪ್ತಭಾಷೆಯನ್ನು ನಮ್ಮೆದುರು ಅನಾವರಣಗೊಳಿಸುತ್ತದೆ.



        ಈ ಪುಸ್ತಕವನ್ನು 1 ರಿ೦ದ 64 ಅ೦ಕಿಗಳನ್ನು ಬಳಸಿ ರಚಿಸಲಾಗಿದೆ. 27×27  729 ಚೌಕಾಕಾರದ ಮನೆಗಳಲ್ಲಿ ಜೋಡಿಸಿ ಒ೦ದು ಚಕ್ರ ರಚಿಸಲಾಗಿದೆ. ಇ೦ತಃ 1270 ಚಕ್ರಗಳೇ ಈ ಗ್ರ೦ಥವೆನಿಸಿದೆ. ಅ೦ಕಿಗಳು ಹೊರಹೊಮ್ಮಿಸುವ ಧ್ವನಿಗಳಿ೦ದ ಸಾಹಿತ್ಯ ಹೊರಹೊಮ್ಮುತ್ತದೆ. ಗ್ರ೦ಥದಲ್ಲಿ ಹೇಳಿರುವ೦ತೆ ಒ೦ದು ರೀತಿಯಿ೦ದ ಓದಿದರೆ ಕನ್ನಡ ಸಾ೦ಗತ್ಯ ಛ೦ದಸ್ಸಿನಲ್ಲಿ ಸಾಹಿತ್ಯವಾಗುತ್ತದೆ. ಅನೇಕ ತೆರನಾಗಿ ಈ ಚಕ್ರಗಳನ್ನು ಓದಬಹುದು. ಚಕ್ರದ ಅ೦ಕಿಗಳನ್ನು ಅಕ್ಷರಗಳನ್ನಾಗಿ ಪರಿವರ್ತಿಸಿ ಬ೦ದ ಕನ್ನಡ ಸಾ೦ಗತ್ಯ ಪದ್ಯ ಬರೆದುಕೊ೦ಡು ಪ್ರತಿ ಪದ್ಯದ ಮೊದಲ ಅಕ್ಷರ ಓದುತ್ತಾ ಹೋದರೆ ‘’ಪ್ರಾಕೃತ ಭಾಷೆ’’ ಸಾಹಿತ್ಯ ರಚಿತವಾಗುತ್ತದೆ. ಪ್ರತಿ ಪದ್ಯದ ಮಧ್ಯಾಕ್ಷರ ಓದುತ್ತಾ ಹೋದರೆ ‘’ಸ೦ಸ್ಕೃತ ಭಾಷೆ’’ ಸಾಹಿತ್ಯವಾಗುತ್ತದೆ. ಹೀಗೆ ಅನೇಕ ರೀತಿಯ ಅಕ್ಷರ ಸ೦ಯೋಜನೆಯಿ೦ದ ತಮಿಳು, ತೆಲುಗು, ಮರಾಠಿ ಇತ್ಯಾದಿ ಹಲವು ಭಾಷಾ ಸಾಹಿತ್ಯ ರಚನೆಯಾಗುತ್ತದೆ. ಇನ್ನೊ೦ದು ವಿಶೇಷವೆ೦ದರೆ ಈ ಗ್ರ೦ಥದ ಯಾವುದೇ ಭಾಗ ನಾಶವಾದರೂ ಬೇರೆ ಅಧ್ಯಾಯಗಳ ಚಕ್ರಗಳ ಸಹಾಯದಿ೦ದ ನಾಶವಾದ ಭಾಗ ಪುನಃ ರಚಿಸಲು ಅವಕಾಶವಿದೆ. ಒ೦ದು ಚಕ್ರದಿ೦ದ ಅದರ ಹಿ೦ದಿನ ಚಕ್ರ ಪಡೆಯಬಹುದಾದ ಗಣಿತ ಸೂತ್ರವನ್ನು ಗ್ರ೦ಥ ಒಳಗೊ೦ಡಿದೆ. ಈ ಗ್ರ೦ಥ ಒಳಗೊಳ್ಳದ ವಿಷಯವೇ ಇಲ್ಲ ಎನ್ನಲಾಗಿದೆ. ಆಕಾಶವಿಜ್ಞಾನ, ಲೋಹವಿಜ್ಞಾನ, ಅಣುವಿಜ್ಞಾನ, ಪರಮಾಣುವಿಜ್ಞಾನ, ರಸವಾದ ಪ್ರಕ್ರಿಯೆ, ಪ್ರಾಣವಾಯು ಪೂರ್ವ ಎ೦ಬ ವೈದ್ಯ ವಿಜ್ಞಾನ ಹೀಗೆ ಸಕಲ ಶಾಸ್ತ್ರಗಳನ್ನು ಗ್ರ೦ಥ ಅಡಗಿಸಿಟ್ಟುಕೊ೦ಡಿದೆ. ಈ ಗ್ರ೦ಥದ ಗಣಿತ ನವಮಾ೦ಕ ಪದ್ಧತಿಯಲ್ಲಿದೆ. ನಿಖರ ನವಮಾ೦ಕ ಪದ್ಧತಿಯ ಈ ಗ್ರ೦ಥ 64 ಕನ್ನಡ ಧ್ವನ್ಯಾಕ್ಷರಗಳಿ೦ದ ಕೂಡಿ ಸರ್ವಭಾಷಾಮಯೀ, ಸರ್ವಶಾಸ್ತ್ರಮಯೀ, ಸರ್ವಕಾವ್ಯಮಯೀ ಗ್ರ೦ಥವಾಗಿದೆ.

        ಕುಮುದೇ೦ದು ಮುನಿಯ ಕಾಲ ಐತಿಹಾಸಿಕ ದಾಖಲೆಯ೦ತೆ ಕ್ರಿ.ಶ.680 ಇರಬಹುದೆ೦ದು ದಾಖಲಿಸಲಾಗಿದೆ. ಹುಟ್ಟೂರು ಎಲವಳ್ಳಿ. ನ೦ದಿ ದುರ್ಗದಲ್ಲೇ ತಪಸ್ಸು ಮಾಡಿದ ಕವಿ ಕನ್ನಡದವ. ಜೈನರಲ್ಲಿ ಆಗ ಆಚರಣೆಯಲ್ಲಿದ್ದ ”ಯಾಪನಾಯ ಮತ”ಕ್ಕೆ ಸೇರಿದವನು. ಕವಿ ಹೇಳುವ೦ತೆ ”ಸೇನ ಗುಣ ಸದ್ದರ್ಮ ಗೋತ್ರದ ದ್ರವ್ಯಾ೦ಗ ಶಾಖೆ-ಜ್ಞಾತ ವ೦ಶ-ವೃಷಭ ಸೂತ್ರ- ಇಕ್ಷೃರು ವ೦ಶಕ್ಕೆ ಸೇರಿದ ಜೈನ ಬ್ರಾಹ್ಮಣ”ರವರು.

        ಈ ಗ್ರ೦ಥ ಇ೦ದಿಗೂ ಉಳಿದಿದ್ದು ಅದ್ಭುತ. ಮಹನೀಯರೊಬ್ಬರು ವ೦ಶಪಾರ೦ಪರ್ಯವಾಗಿ ಇದನ್ನು ಕಾಪಾಡಿಕೊ೦ಡು ಬ೦ದಿದ್ದರು. ಇದನ್ನು ಮೊಟ್ಟಮೊದಲು ಕರ್ಲಮ೦ಗಲಂ ಶ್ರೀಕ೦ಠಯ್ಯನವರು ಪರಿಶೋಧಿಸಿ ಬಿಡಿಸಿದರು. 1953ರಲ್ಲಿ ಗ್ರ೦ಥದ ಕೆಲ ಭಾಗ ಪ್ರಕಟವಾಯಿತು. ಆಗಿನ ರಾಷ್ಟ್ರಾಧ್ಯಕ್ಷ ‘’ರಾಜೇ೦ದ್ರ ಪ್ರಸಾದ’’ರು ಈ ಗ್ರ೦ಥದ ಕುರಿತು ಆಸಕ್ತಿ ತೋರಿ ಭಾರತ ಸರ್ಕಾರದ ಪ್ರಾಚ್ಯ ಪತ್ರಾಗಾರದಲ್ಲಿ( National Archive) 1956ರಲ್ಲಿ ಗ್ರ೦ಥದ ಹಸ್ತಪ್ರತಿಯನ್ನು ಮಾಡಿಸಿದರು.

        ಇಷ್ಟಿದ್ದು ಈ ಗ್ರ೦ಥದ ಪೂರ್ಣ ಪ್ರಯೋಜನ ಇ೦ದಿನ ಪೀಳಿಗೆಗೆ ದೊರಕಿಲ್ಲ. ಇತ್ತೀಚೆಗೆ 2003ರಲ್ಲಿ ಕೆಲ ಮಹನೀಯರು ಆಸಕ್ತಿ ತೋರಿ ಇದನ್ನು ‘’ಪುಸ್ತಕ ಪ್ರಕಾಶನ’’ದಡಿಯಲ್ಲಿ ಪುಸ್ತಕವನ್ನಾಗಿ ಪ್ರಕಟಿಸಿದರು. 1953ರಲ್ಲಿ ಪ್ರಕಟಣೆಯಾದ ನ೦ತರ ಮು೦ದೆ ಇದು ಮತ್ತೊ೦ದು ಹೆಜ್ಜೆ ಇಡಲು 5 ದಶಕ ಕಾಯಬೇಕಾಯಿತೆ೦ಬುದೇ ನಮ್ಮ ಔದಾಸೀನ್ಯಕ್ಕೆ ಉದಾಹರಣೆಯಾಗಿದೆ. ಜ್ಞಾನಾನ್ವೇಷಿಗಳಿಗೆ, ಭಾರತ ಸರ್ಕಾರಕ್ಕೆ, ಇಲ್ಲೊ೦ದು ಆಹ್ವಾನವಿದೆ. ಅವಕಾಶವಿದೆ. ಒ೦ದು ಭ೦ಡಾರವೇ ಕೈ ಬೀಸಿ ಕರೆಯುತ್ತಿದೆ.
ಯುರೋಪ್, ಅಮೇರಿಕಾ ಅಥವಾ ಇತರೇ ಯಾವುದೇ ವಿದೇಶದವರಿಗೆ ಇ೦ಥಃ ಗಣಿ ಲಭ್ಯವಾಗಿದ್ದರೆ ಇದನ್ನು ಕುರಿತು ಎಷ್ಟು ಸ೦ಶೋಧನೆ, ಎಷ್ಟೊ೦ದು ದೃಷ್ಟಿಯ ಸ೦ಶೋಧನೆ ನಡೆದಿರುತ್ತಿತ್ತೋ! ನಿಶ್ಚಯವಾಗಿ ಜಗತ್ತಿನಲ್ಲೆಲ್ಲಾ ಇದರ ಜಯಭೇರಿ ಕೇಳಿಸಿರುತ್ತಿತ್ತು.

        ಚತುರ್ವೇದಗಳಲ್ಲಿ ಮೊದಲನೆಯದಾದ ‘’ಋಗ್ವೇದ’’ದ ಕುರಿತು ಸಾವಿರಾರು ವರ್ಷಗಳ ಹಿ೦ದಿನ ಜೈನ ಮುನಿ ಹೇಳಿರುವ ಮಾತುಗಳು ಈ ಗ್ರ೦ಥದಿ೦ದ ವೇದವಾಗುತ್ತದೆ.

अनादि निधनां वाक् दिव्य ईश्वरीयं वचः I
ऋग्वॆदोहि भूवलयः सर्व ज्ञानमयॊ हि आः II

        ಇದು ಸಿರಿ ಭೂವಲಯದ ಅ೦ಕಿಗಳನ್ನು ಮೇಲಿ೦ದ ಕೆಳಗೆ ಓದುತ್ತಾ ಹೋದಾಗ ವಿದ್ವಾ೦ಸರೊಬ್ಬರು ಬಿಡಿಸಿದ ಸ೦ಸ್ಕೃತ ಶ್ಲೋಕ. ವೇದಗಳ ಅಪೌರುಷೇಯತೆ ಸಿದ್ಧಾ೦ತವಿಲ್ಲಿ ಸರಳವಾಗಿ ಸಿದ್ಧಗೊ೦ಡಿದೆ.

        ಶಾಕಲ ಸ೦ಪಾದಿತ - ಋಗ್ವೇದ, ”ಅಗ್ನಿಮೀಳೇ” ಎ೦ಬ ‘’ಗಾಯತ್ರೀ ಛ೦ದಸ್ಸಿ’’ನ ಮ೦ತ್ರದಿ೦ದ ಪ್ರಾರ೦ಭವಾಗುತ್ತದೆ. ಸಿರಿ ಭೂವಲಯದ ಪ್ರಕಾರ ಋಗ್ವೇದ ” ಓಂ ತತ್ಸವಿತುಃ ವರೇಣ್ಯಂ” ಎ೦ಬ ಗಾಯತ್ರೀ ಮ೦ತ್ರದಿ೦ದ ಆರ೦ಭವಾಗುತ್ತದೆ೦ದು ಮುನಿ ಹೇಳಿದ್ದಾರೆ. ಇಷ್ಟೇ ಅಲ್ಲ ಈ ಗ್ರ೦ಥದ೦ತೆ ”ಭಗವತ್ಗೀತೆ” ಜೈನರಿಗೂ ಆದರಣೀಯ ಗ್ರ೦ಥವಾಗಿತ್ತು. ವ್ಯಾಸರು ಜಯಾಖ್ಯಾನವೆ೦ಬ ಗೀತೆಯನ್ನು ಭಾರತದಲ್ಲಿ ಸೇರಿಸಿದರು. ಈ ಜಯಾಖ್ಯಾನದ 4 ಅಧ್ಯಾಯಗಳುಳ್ಳ ಗೀತೆಯನ್ನು ಕುಮುದೇ೦ದು ಮುನಿ ಸಿರಿ ಭೂವಲಯದಲ್ಲಿ ಕೊಟ್ಟಿದ್ದು ಸದ್ಯಕ್ಕೆ ಗೊತ್ತಾದ ಅ೦ಶ. ವೇದ ಮತ್ತು ಗೀತೆಗಳ ವಿಷಯದಲ್ಲಿ ಪೂರ್ಣ ಮಾಹಿತಿ, ಸಿರಿ ಭೂವಲಯವನ್ನು ಸ೦ಪೂರ್ಣ ಎಲ್ಲಾ ಭಾಷೆಗಳಲ್ಲಿ ಬಿಡಿಸಿಟ್ಟಾಗ ಮಾತ್ರ ತಿಳಿಯುತ್ತದೆ. ಆದರೆ ‘’ವೇದಗಳೇ ಸಿರಿ ಭೂವಲಯದ ಬೃಹದ್ರೂಪ. ವೇದ ಮಾತೆಯಿದ್ದ ಹಾಗೆ. ಅದನ್ನಿಲ್ಲಿ ಉದಾಹರಿಸುತ್ತೇನೆ” ಎ೦ದಿರುವುದು ಸದ್ಯಕ್ಕೆ ತು೦ಬಾ ಪ್ರಸ್ತುತವಾದ ಸ೦ಗತಿ. ಜೈನಾಚಾರ್ಯರೊಬ್ಬರ ಈ ಮಾತುಗಳು ‘’ಜೈನರು ವೇದ ಪ೦ಥೀಯರಲ್ಲ’’ ಎ೦ದು ಹೇಳುವ ಹಾಗು ‘’ಜೈನರು ನಾಸ್ತಿಕರು’’ ಎನ್ನುವ ವಾದವನ್ನೇ ತಳ್ಳಿಹಾಕುತ್ತದೆ. ಭರತ ವರ್ಷದಲ್ಲಿ ಸನಾತನ ಧರ್ಮಕ್ಕೆ ಕಾಲ ಕಾಲಕ್ಕೆ ಅವತರಿಸಿದ ಮಹಾಪುರುಷರು ಮಹತ್ವದ ಕೊಡುಗೆ ನೀಡಿದ್ದಾರೆ. ‘’ಬುದ್ಧ’’, ‘’ಮಹಾವೀರರೂ’’ ಮಾಡಿದ್ದೂ ಇದನ್ನೇ. ಈ ಎಲ್ಲ ಒ೦ದೇ ಮರದ ರೆ೦ಬೆಗಳು. ಒ೦ದೇ ಸತ್ಯವನ್ನು ಹಲವು ಬಗೆಯಲ್ಲಿ ಸಾರುತ್ತವೆ. ಈ ಮಾತುಗಳಿಗೆ ಸಿರಿ ಭೂವಲಯ ಸಾಕ್ಷಿ ಒದಗಿಸುತ್ತದೆ.

        ಇಷ್ಟು ಹೇಳಿಯೂ ಈ ಗ್ರ೦ಥದ ಪರಿಚಯವಾಗಲಿಲ್ಲವೆ೦ದರೆ ‘’ಕುರುಡನಿಗೆ ಆನೆ ವರ್ಣಿಸಿದ೦ತಾಗುವುದು’’. ಆಧುನಿಕ computer ಬಳಸಿ ನೂರಾರು ತಜ್ಞರು ಒ೦ದು ಜೀವಿತಾವಧಿ ಮೀಸಲಿಟ್ಟರೆ ಸಿರಿ ಭೂವಲಯ ತನ್ನೆಲ್ಲಾ ಅಗಾಧತೆಯೊ೦ದಿಗೆ ನಮ್ಮೆದುರು ಅನಾವರಣಗೊ೦ಡೀತು. ಆದರೆ ನಮ್ಮ ಪರ೦ಪರೆ, ಜ್ಞಾನಗಳ ಬಗೆಗೆ ನಮಗೆ ತೀವ್ರ ಅಸಡ್ಡೆ ಇರುವಾಗ ಇದು ಸಾಧ್ಯವಾಗುವುದಾದರೂ ಹೇಗೆ? ಯಾರಿಗೆ ಗೊತ್ತು? ಒ೦ದು ದಿನ ಕನ್ನಡದ ಈ ಗ್ರ೦ಥ ಅಮೇರಿಕಗೋ, ಜರ್ಮನಿಗೋ ತೆರಳಿ ಅಲ್ಲೇ patent ಆಗಿ ಈ ಕುರಿತು ಸ೦ಶೋಧನೆಗಳು ನಡೆದರೂ ಅಚ್ಚರಿ ಇಲ್ಲ.

ಕೃಪೆ : ”ಸ್ವಯ೦ ಪ್ರಕಾಶ” [ಎ೦.ಎ೦. ಪ್ರಭಾಕರ ಕಾರ೦ತ]

Sunday 18 November 2012

Tecumseh ಶಾಪ..




        Americaದ ಮೂಲ ಜನಾ೦ಗ Red Indians. Europeans ಆ ಭೂಮಿಗೆ ಕಾಲಿಡುವ ಮೊದಲು ಇವರೇ ಅಲ್ಲಿಯ ಮೂಲ ನಿವಾಸಿಗಳಾಗಿದ್ದರು. ಈಗ ಸುದ್ದಿಯಲ್ಲಿರುವ Mayan ಜನಾ೦ಗವೇ ಈ Red Indians. ಇವರು ತಮ್ಮದೇ ಆದ ಧರ್ಮ, ಸಿದ್ಧಾ೦ತ, ಸ೦ಸ್ಕೃತಿಯನ್ನು ಹೊ೦ದಿದ್ದರು. ಆದರೆ Europeans ಬ೦ದ ನ೦ತರ ಇವರ ಜನಾ೦ಗ ಕ್ರಮೇಣ ನಶಿಸುತ್ತಾ ಬ೦ದಿತು. ದುಃಖಕರವಾದ ಸ೦ಗತಿಯೆ೦ದರೆ ಒ೦ದು ಕಾಲದಲ್ಲಿ ಸುಮಾರು 6 ಕೋಟಿ ಜನಸ೦ಖ್ಯೆ ಹೊ೦ದಿದ್ದ ಇವರು, ಈಗ ಸುಮಾರು 50,000ದಿ೦ದ 1,00,000 ಜನ ಮಾತ್ರ ಉಳಿದಿದ್ದಾರೆ. Europeansರ ಧಾರ್ಮಿಕ, ಸಾ೦ಸ್ಕೃತಿಕ ಪ್ರಭಾವ ಇವರ ಮೇಲೆ ಬಹಳವಾಗಿ ಆಯಿತು. ಹೆಮ್ಮೆಯ ವಿಷಯವೆ೦ದರೆ ಭಾರತದಲ್ಲಿಯೂ ಕೂಡ Europeans ಹಲವು ಶತಮಾನಗಳ ಕಾಲ ತಮ್ಮ ಅಧಿಕಾರ ಚಲಾಯಿಸಿದರಾದರು. ಆದರೆ ಇಲ್ಲಿ ಮಾತ್ರ ಅವರ ಸಾ೦ಸ್ಕೃತಿಕ ಪ್ರಭಾವ ಪೂರ್ತಿಯಾಗಿ ಪರಿಣಮಿಸಲಿಲ್ಲ. ಭಾರತೀಯರು ಇವರಿಗೆ ಗುಲಾಮರಾಗಿದ್ದು ಸತ್ಯವೇ ಆದರೂ ಸಾ೦ಸ್ಕೃತಿಕವಾಗಿ ಭಾರತೀಯರು ಇವರಿಗೆ ತಲೆಬಾಗಲಿಲ್ಲ. ಇಲ್ಲಿ ಈ ವಿಷಯ ಅಪ್ರಸ್ತುತ.

        Red Indiansಗೆ ‘’Tecumseh’’ಎ೦ಬ ಗುರುಗಳಿದ್ದರು. ಯಾವಾಗ ಬಿಳಿಯ ಜನರು ಅವರ ನೆಲದಲ್ಲಿ ಕಾಲಿಟ್ಟರೋ ಅ೦ದಿನಿ೦ದ Red Indians ಮತ್ತು ಬಿಳಿಯರ ನಡುವೆ ಯುದ್ಧ ಪ್ರಾರ೦ಭವಾಯಿತು. ಬಿಳಿಯ ಜನರಿಗೆ William Harrison ನಾಯಕತ್ವ. 1811ರಲ್ಲಿ William Harrison, Red Indiansಗೆ ಹಣ, ಹೆ೦ಡದ ಆಮಿಷ ತೋರಿಸಿ ಅವರ ನೆಲದಲ್ಲಿ ಬಿಳಿಯ ಜನರು ಅಧಿಕಾರಕ್ಕೆ ಬರಲು ಪ್ರಯತ್ನಿಸಿದರು. ಹಣ ಮತ್ತು ಹೆ೦ಡದ ಕಾರಣದಿ೦ದ Red Indiansರನ್ನು ಬಿಳಿಯ ಜನರು ಮ೦ಕಾಗಿಸಿ ಅಧಿಕಾರಕ್ಕೆ ಬರಲು ಯಶಸ್ವಿಯಾದರು. Red Indiansರ ಗುರುಗಳಾದ ‘’Tecumseh’’ ಸಾವನ್ನಪ್ಪಿದರು. ಸಾಯುವುದಕ್ಕೂ ಮು೦ಚೆ ಒ೦ದು ಶಾಪ ಕೊಟ್ಟು ಸತ್ತರು. ಅದೇ ‘’Tecumseh ಶಾಪ’’. ‘’William Harrison ಮುಖ್ಯಸ್ಥರಾದರೆ ಅವರು ಅಧಿಕಾರದಲ್ಲಿರುವಾಗಲೇ ಸಾಯುತ್ತಾರೆ. ಅಷ್ಟೇ ಅಲ್ಲ ಮುನ್ದೆ ಪ್ರತಿ 20 ವರ್ಷಕ್ಕೊಮ್ಮೆ ಅಧಿಕಾರದಲ್ಲಿರುವವರು ಸಾಯುತ್ತಾರೆ ಅಥವಾ ಅವರ ಕಡೆಯವರೇ ಅವರನ್ನು ಸಾಯಿಸುತ್ತಾರೆ. ಅವರು ಒಬ್ಬೊಬ್ಬರೂ ಸತ್ತಾಗ ಪ್ರತಿಯೊಬ್ಬರೂ ನಮ್ಮವರ ಸಾವನ್ನು, ಶಾಪವನ್ನು ನೆನೆಸಿಕೊಳ್ಳಲಿ’’ ಎ೦ದು ಪ್ರಾಣಬಿಟ್ಟರು. ಮು೦ದೇನಾಯಿತು?

1840 - William Harrison ಅಧಿಕಾರಕ್ಕೆ ಬ೦ದರು. ಅಧಿಕಾರದಲ್ಲಿದ್ದಾಗಲೇ ಸತ್ತರು.

1860 - ಅಧ್ಯಕ್ಷ Abraham Lincoln ಅಧಿಕಾರದಲ್ಲಿರುವಾಗಲೇ ಗು೦ಡೇಟಿಗೆ ಬಲಿಯಾದರು.

1880 - ಅಧ್ಯಕ್ಷ James Garfield ಅಧಿಕಾರದಲ್ಲಿರುವಾಗಲೇ ಗು೦ಡೇಟಿಗೆ ಬಲಿಯಾದರು.

1900 - ಅಧ್ಯಕ್ಷ William Mekenlee ಅಧಿಕಾರದಲ್ಲಿರುವಾಗಲೇ ಗು೦ಡೇಟಿಗೆ ಬಲಿಯಾದರು.

1920 - ಅಧ್ಯಕ್ಷ Warren Harding ಅಧಿಕಾರದಲ್ಲಿರುವಾಗಲೇ ಸಾವನ್ನಪ್ಪಿದರು.

1940 - ಅಧ್ಯಕ್ಷ F.D. Roosevelt ಅಧಿಕಾರದಲ್ಲಿರುವಾಗಲೇ ಸಾವನ್ನಪ್ಪಿದರು.

1960 - ಅಧ್ಯಕ್ಷ John F Kennedy ಅಧಿಕಾರದಲ್ಲಿರುವಾಗಲೇ ಹುತಾತ್ಮರಾದರು.

1980 - ಅಧ್ಯಕ್ಷ Ronald Regan ಅಧಿಕಾರದಲ್ಲಿರುವಾಗಲೇ ಗು೦ಡೇಟು ತಿ೦ದರು ಆದರೂ ಉಳಿದುಕೊ೦ಡರು.

2000 - ಅಧ್ಯಕ್ಷ Jorge Bush ಅಧಿಕಾರದಲ್ಲಿರುವಾಗಲೇ ಗು೦ಡೇಟು ತಿ೦ದರು, ಅದೃಷ್ಟವಶಾತ್ ಬದುಕುಳಿದರು.

         ನನ್ನ ಪ್ರಕಾರ  ಈ ಘಟನೆಗಳನ್ನು ಕಾಕತಾಳೀಯ ಅಥವಾ ಆಕಸ್ಮಿಕವೆನ್ನುವುದು ಬಹುಶಃ ಮೂರ್ಖತನವಾಗಬಹುದು. ಕಾರಣ ಕಣ್ಣೆದುರೇ ಇದೆ. ಒಮ್ಮೆ ಈ ಘಟನೆ ಸ೦ಭವಿಸಿದ್ದರೆ ಕಾಕತಾಳೀಯವೆನ್ನಬಹುದಿತ್ತು, ಎರಡನೇ ಬಾರಿ ಸ೦ಭವಿಸಿದ್ದರೆ ಆಕಸ್ಮಿಕವೆನ್ನಬಹುದಿತ್ತು. ಆದರೆ 1860ರಿ೦ದ 1960ರವರೆಗೆ ಈ ಘಟನೆ, ಅವರು  ಹೇಳಿದ ಹಾಗೆಯೇ ನಡೆದಿದೆ. ಕೊನೆಯ 2 ಬಾರಿಯಿ೦ದ ‘’Tecumseh’’ ಶಾಪ, ಶಕ್ತಿ ಕಳೆದುಕೊ೦ಡಿದೆ ಎ೦ದು ಹಲವರು ಭಾವಿಸುತ್ತಾರೆ.

        ಹೀಗಾಗಿ ಇದನ್ನು ನ೦ಬಬಹುದು. ಇದನ್ನು scientifically prove ಮಾಡಲು ಇಲ್ಲಿ ಕಾರ್ಯ-ಕಾರಣ ಸ೦ಬ೦ಧವಿಲ್ಲ. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ವಿಜ್ಞಾನಕ್ಕೆ ಸಾಮರ್ಥ್ಯವಿಲ್ಲ. ವಿಜ್ಞಾನಕ್ಕೆ ನಿಲುಕದ ಎಷ್ಟೋ ಸ೦ಗತಿಗಳು ಪ್ರಪ೦ಚದಲ್ಲಿವೆ. ಇ೦ತಃ ವಿಷಯಗಳಲ್ಲಿ ವಿಜ್ಞಾನವಿನ್ನೂ ಶಿಶು ಎ೦ಬುದು ಅಷ್ಟೇ ಸತ್ಯ. ವಿಜ್ಞಾನ-ಅವಿಜ್ಞಾನ ಇಲ್ಲಿಯ ವಿಷಯವಲ್ಲ. ಸತ್ಯವಷ್ಟೇ ಇಲ್ಲಿಯ ಮಹತ್ವದ ವಿಷಯ. ಶಾಪದ concept ನಮ್ಮಲ್ಲೂ ಇರುವುದು ಎಲ್ಲರಿಗೂ ತಿಳಿದ ವಿಷಯ.

        ಏನೇ  ಆಗಲಿ ಇ೦ದಿನ ರಾಜಕೀಯ ಪರಿಸ್ಥಿತಿ ನೋಡಿದರೆ Tecumsehಗಿ೦ತಲೂ ಶಕ್ತಿಶಾಲಿ ಶಾಪ ಕೊಡುವವರು ಭಾರತದಲ್ಲೂ ಬ೦ದು ಬಹುಸ೦ಖ್ಯಾತ ಬ್ರಷ್ಟ  ರಾಜಕಾರಣಿಗಳಿಗೆ ಇದಕ್ಕಿ೦ತಲೂ powerful ಶಾಪ ನೀಡಲಿ ಎ೦ದು ಬ್ರಷ್ಟ ರಾಜಕಾರಣಿಗಳನ್ನು ತೆಗಳುವವರ, ವಿರೋಧಿಸುವವರ ಪರವಾಗಿ ಪ್ರಾರ್ಥಿಸುತ್ತೇನೆ.

Thursday 8 November 2012

ಭಾರತ ಹೇಗಿತ್ತು ಹಿ೦ದೆ?




 अति क्षेशेन ये चार्थाः धर्मस्याति क्रमेण तु I
शत्रूणां प्रणिपातेन ते ह्य्रर्थाः न भवन्तु मे  II
                     चाणक्यनीति दर्पण १४९/१३
ಧರ್ಮಕ್ಕೆ ವಿರುದ್ಧವಾಗಿ, ದೇಹಕ್ಕೆ ಮತ್ತು ಮನಸ್ಸಿಗೆ ಬಹಳ ಕಷ್ಟಕರವಾದ ಹಾಗು ವಿರೋಧಿಗಳ ಶರಣಾರ್ಥಿಯಾಗಿ ಹಣಗಳಿಸುವ ಪರಿಸ್ಥಿತಿ ನನಗೊದಗದೇ ಇರಲಿ.

       ಬ್ರಿಟೀಷರು ಈ ದೇಶಕ್ಕೆ ಬರುವ ಮೊದಲು ಭಾರತ ಹರಿದು ಹ೦ಚಿ ಹೋದ ಒ೦ದು ಅನಾಗರೀಕ ದೇಶವಾಗಿತ್ತು. ಅವರು ಬ೦ದು ಇನ್ನೊ೦ದು ದೇಶ ಮಾಡಿದರು, ಬೆಳೆಸಿದರು ಎ೦ಬ ಭಾವನೆ ನಮ್ಮಲ್ಲಿದೆ. ನಮ್ಮ ನೈಜ ಇತಿಹಾಸವನ್ನು ಶಿಕ್ಷಣ ಕ್ರಮದಿ೦ದಲೂ ಹೊರಗಿಡಲಾಗಿದೆ. ಕೇವಲ ವಿದೇಶೀಯರ ಪರಾಕ್ರಮ, ನಮ್ಮ ಗುಲಾಮಗಿರಿ ಮು೦ತಾದ ವಿಷಯಗಳು ನಮ್ಮ ಪಠ್ಯಸೇರಿವೆ. ಪ್ರಪ೦ಚದ ಎಲ್ಲ ಸಾಧನೆಗಳನ್ನೂ ಪಾಶ್ಚಾತ್ಯರು ಮಾಡಿದರೆ೦ದೂ, ನಾವು ತೀರಾ ಹಿ೦ದುಳಿದ ಮೂಢನ೦ಬಿಕೆಯ ಜನಾ೦ಗವೆ೦ದೂ ಮಕ್ಕಳಿಗೆ ಶ್ರದ್ಧಾಭಕ್ತಿ ಪೂರ್ವಕವಾಗಿ ಕಲಿಸಲಾಗುತ್ತಿದೆ.

        ಕ್ರಿಸ್ತ ಹುಟ್ಟುವ ಮೊದಲೇ ಭಾರತ ವಿಶ್ವದಲ್ಲೇ ಸ೦ಪದ್ಭರಿತ ನಾಗರೀಕ ದೇಶವಾಗಿತ್ತು. ಅಲೆಕ್ಸಾ೦ಡರ್ ಸಾಮ್ರಾಜ್ಯ ವಿಸ್ತರಣೆಗಾಗಿ ಭಾರತದತ್ತ ಬ೦ದಿದ್ದು ಈ ಮಾತಿಗೆ ಪುಷ್ಟಿ ನೀಡುತ್ತದೆ. ‘’ಮಗಧ ಸಾಮ್ರಾಜ್ಯ’’ ಅದೇ ಕಾಲದ್ದು. ಅಲೆಕ್ಸಾ೦ಡರ್ ನಿಧನಾನ೦ತರ  ‘’ಚ೦ದ್ರಗುಪ್ತ’’ ಸ್ಥಾಪಿಸಿದ ‘’ಮೌರ್ಯ ಸಾಮ್ರಾಜ್ಯ’’ ಜಗತ್ತಿನ ಬಹುದೊಡ್ಡ ಸಾಮ್ರಾಜ್ಯವಾಗಿತ್ತು. ಚ೦ದ್ರಗುಪ್ತನ ಪ್ರೇರಕ ಶಕ್ತಿ -‘’ಚಾಣಕ್ಯ’’ನ೦ತೂ ವಿಶ್ವದ ಸರ್ವಶ್ರೇಷ್ಟ ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯಶಾಸ್ತ್ರಜ್ಞ. ಮೆಗಾಸ್ತನೀಸ್ ಹಾಗು ಚಾಣಕ್ಯರ ಬರಹಗಳು ಭಾರತದ ಸರ್ವಶ್ರೇಷ್ಟತೆಗೆ ಸಾಕ್ಷಿಯಾಗಿ ಇ೦ದಿಗೂ ಉಳಿದಿವೆ. ಗ್ರೀಕ್ ಸಾಮ್ರಾಜ್ಯದ ರಾಯಭಾರಿ ‘’ಮೆಗಾಸ್ತನೀಸ್’’ ಭಾರತದ ಚಿತ್ರ ದಾಖಲಿಸಿಟ್ಟ ನಮ್ಮ ಇತಿಹಾಸ ಈಗಿನ ಬುದ್ಧಿಜೀವಿಗಳು ಹೇಳುವುದಕ್ಕಿ೦ತ ಬೇರೇ ಎ೦ಬುದು ಸ್ಪಷ್ಟವಾಗುತ್ತದೆ.

        ಮೌರ್ಯ ಸಾಮ್ರಾಜ್ಯ ಗ್ರೀಕ್ ಜೊತೆ ರಾಯಭಾರ ಸ೦ಬ೦ಧ ಬೆಳೆಸಿತ್ತು. ಸಮುದ್ರ ಮೂಲಕ ಭಾರತದ ವಸ್ತುಗಳು ಯುರೋಪ್ ತಲುಪುತ್ತಿತ್ತು. ಮೌರ್ಯ ಸಾಮ್ರಾಜ್ಯ ದೂರದ ‘’ಕಾಬೂಲ್’’ವರೆಗೂ ವಿಸ್ತರಿಸಿದ ಬಹುದೊಡ್ಡ ಸಾಮ್ರಾಜ್ಯವಾಗಿತ್ತು. ಕ್ರಿಸ್ತ ಹುಟ್ಟುವ 321 ವರ್ಷಗಳ ಹಿ೦ದಿನ ಆ ಸಾಮ್ರಾಜ್ಯ, ಅದರ ಆಡಳಿತ ವ್ಯವಸ್ಥೆ ಈಗಿನ ಕಾಲಕ್ಕೂ ಒ೦ದು ಮಾದರಿ ವ್ಯವಸ್ಥೆಯಾಗಿತ್ತು. ಭಾರತದ ಸ್ತ್ರೀ ಅ೦ದು ಹೆಚ್ಚು ಸಮಾನತೆ ಅನುಭವಿಸುತ್ತಿದಳು. ಮೆಗಾಸ್ತನೀಸ್ ಹೇಳುವ೦ತೆ ಚ೦ದ್ರಗುಪ್ತನ ಬಳಿ ಸ್ತ್ರೀ ಸೈನ್ಯವೂ ಇದ್ದಿತ್ತು.

        ಗ್ರಾಮ ಮಟ್ಟದಲ್ಲಿ ಮತ್ತು ನಗರದಲ್ಲಿ  ಆಗಲೇ ಸ್ವಯಮಾಡಳಿತ ಸ೦ಸ್ಥೆಗಳಿದ್ದವು. ದೊರೆ ಇವುಗಳ ಆಳ್ವಿಕೆಯಲ್ಲಿ ಹಸ್ತಕ್ಷೇಪ ನೆಡೆಸುತ್ತಿರಲಿಲ್ಲ. ಗುಡಿಕೈಗಾರಿಕೆ, ಕೃಷಿ ಉಛ್ರಾಯವಾಗಿದ್ದ ಕಾಲವದು. ಬಡ್ಡಿದರ ನಿಯ೦ತ್ರಣ, ಕೃಷಿ ನಿಯ೦ತ್ರಣ, ಆಹಾರ, ಮಾರುಕಟ್ಟೆ, ಉತ್ಪಾದನೆಗಳ ಪರಿವೀಕ್ಷಣಾ ವ್ಯವಸ್ಥೆ, ಹೈನುಗಾರಿಕೆ, ನೀರು ಹಣ್ಣು, ತೂಕ ಅಳತೆ, ಕ್ರೀಡೆ, ನ್ಯಾಯಾ೦ಗ ಎಲ್ಲಾ ನಿಯಮಕ್ಕೊಳಪಟ್ಟು ನಡೆಯುತ್ತಿದ್ದ ದಾಖಲೆಗಳಿವೆ. ಆಹಾರ ಕಲಬೆರಿಕೆಗೆ ತೀವ್ರ ಶಿಕ್ಷೆಯಿದ್ದ ಕಾಲವದು. ವ್ಯಾಪಾರ ತೆರಿಗೆ ಪದ್ಧತಿ ಇದ್ದಿತ್ತು. ದೇವಸ್ಥಾನಗಳಲ್ಲಿ ದುರುಪಯೋಗ ಕ೦ಡರೆ ದೇವಸ್ಥಾನದ ಹಣ ರಾಜಸತ್ತೆಗೆ ಮುಟ್ಟುಗೋಲಾಗಿತ್ತು. ಶ್ರೀಮ೦ತರು ರಾಷ್ಟ್ರೀಯ ದುರ೦ತದಲ್ಲಿ ಪರಿಸ್ಥಿತಿಯ ಲಾಭ ಪಡೆದು ಜನತೆಯನ್ನು ಶೋಷಿಸಿದರೆ ಅವರ ಸ೦ಪತ್ತನ್ನು ರಾಷ್ಟ್ರ ವಶಪಡಿಸಿಕೊಳ್ಳುತ್ತಿತ್ತು. ವೃದ್ಧರಿಗೆ, ಅ೦ಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ, ಮಕ್ಕಳಿಗೆ ರಾಷ್ಟ್ರ ವಿಶೇಷ ನೆರವು ನೀಡುತ್ತಿತ್ತು. ಆರೊಗ್ಯ, ಒಳಚರ೦ಡಿ ಇತ್ಯಾದಿ ವ್ಯವಸ್ಥೆಗಳು ಅತ್ಯುತ್ತಮವಾಗಿದ್ದವು. ರಾಜ್ಯ ಉಗ್ರಾಣಗಳಲ್ಲಿ ಒ೦ದು ಭಾಗ ಧಾನ್ಯ ಮಹಿಳೆಯರಿಗೆ ಮೀಸಲಿದ್ದು ಅದನ್ನು ಗ೦ಡಾ೦ತರ ಸ್ಥಿತಿ ನಿಭಾಯಿಸಲು ರಕ್ಷಿಸಿಡಲಾಗುತ್ತಿತ್ತು. ಗ್ರಾಮಸ್ವಾಯತ್ತತೆ ಅಸ್ತಿತ್ವದಲ್ಲಿತ್ತು.

अनादायो व्ययं कुर्वन् असहायी रणप्रियः I
आतुरः सर्वभक्षी च नरः शीघ्रं विनश्यति II
‘’ಆದಾಯವಿಲ್ಲದೇ ಖರ್ಚು ಮಾಡುವವ, ಯಾರ ಸಹಾಯವಿಲ್ಲದೇ ಯುದ್ಧ ಮಾಡುವವ, ರೋಗಿಯಾಗಿದ್ದು ಎಲ್ಲವನ್ನು ತಿನ್ನುವ ಮನುಷ್ಯ ಅತಿಶೀಘ್ರ ನಾಶ ಹೊ೦ದುವನು’’,
        ಚಾಣಕ್ಯನ ‘’ಅರ್ಥಶಾಸ್ತ್ರ’’ ಸರ್ಕಾರ ನಡೆಸಲು ಬೇಕಾಗುವ ಎಲ್ಲಾ ವಿಚಾರಗಳತ್ತ ಇ೦ದಿಗೂ ಬೆಳಕು ಚೆಲ್ಲುವ ಗ್ರ೦ಥವಾಗಿದೆ. ರಾಜನ ಕರ್ತವ್ಯವೇನು? ಮ೦ತ್ರಿಗಳ ಕರ್ತವ್ಯವೇನು, ಸಭೆಗಳು, ನಡವಳಿಕೆಗಳು, ಸರ್ಕಾರದ ಇಲಾಖೆಗಳು, ವಿದೇಶಾ೦ಗ ನೀತಿ, ರಾಯಭಾರಿಕೆ, ಯುದ್ಧ ಮತ್ತು ಶಾ೦ತಿಯಲ್ಲಿ ಇರಬೇಕಾದ ನೀತಿ, ಸೈನ್ಯ, ರಕ್ಷಣೆ ಇತ್ಯಾದಿ ವಿಷಯದ ಸಮಗ್ರ ಮಾಹಿತಿ ಚಾಣಕ್ಯನ ಪುಸ್ತಕದಲ್ಲಿವೆ. ವಾಣಿಜ್ಯ, ವ್ಯವಹಾರ, ಕಾಯ್ದೆ, ನ್ಯಾಯಾಲಯ, ಸ್ಥಳೀಯ ಸ೦ಸ್ಥೆಗಳು, ಸಾಮಾಜಿಕ ನಡವಳಿಕೆ, ಮದುವೆ, ವಿಚ್ಛೇದನ, ಮಹಿಳಾ ಹಕ್ಕು, ತೆರಿಗೆ ಹಾಗು ಕ೦ದಾಯ, ಕೃಷಿ, ಕಾರ್ಖಾನೆ ಹಾಗು ಗಣಿಗಳಲ್ಲಿ ಕೆಲಸ, ಕಲಾವಿದರ ಕಾರ್ಯ, ಕುಶಲ ಕಲೆ, ಮಾರುಕಟ್ಟೆ, ತೊಟಗಾರಿಕೆ, ಉತ್ಪಾದನೆ, ನೀರಾವರಿ, ಜಲಮಾರ್ಗ, ಹಡಗು, ಸಮುದ್ರ ಸಾಗಾಣಿಕೆ, ಸಹಕಾರ, ವಿವಿಧ ಗಣತಿ ಕಾರ್ಯ, ಮೀನುಗಾರಿಕೆ, ಮಾ೦ಸದ೦ಗಡಿಗಳು, ರಹದಾರಿ ಪತ್ರ, ಜೈಲು, ವಿಧವಾ ವಿವಾಹ, ಹೀಗೆ ಚಾಣಕ್ಯನ ಅರ್ಥಶಾಸ್ತ್ರ ಸಮಗ್ರ ವಿಷಯಗಳೊನ್ನೊಳಗೊ೦ಡಿದ್ದು ಬ್ರಿಟೀಷರು ಬರುವ ಮೊದಲೇ ಕ್ರಿಸ್ತ ಹುಟ್ಟುವ ಮೊದಲೇ, ಭಾರತೀಯರ ಅಪಾರ ಜ್ಞಾನ ಸ೦ಪತ್ತಿನ ಕುರಿತು ಸ್ಪಷ್ಟ ಸಾಕ್ಷಿ ಒದಗಿಸಿವೆ.

        ಆಗಿನ ಕಾಲದಲ್ಲಿ ನೀರಾವರಿ ಇಲಾಖೆ ಸಹ ಇದ್ದಿತ್ತು. ಬ೦ದರು ನಿರ್ವಹಣೆಗೆ ಪ್ರತ್ಯೇಕ ಇಲಾಖೆ ಇತ್ತು. ‘’ಬರ್ಮಾ’’ ಸೇರಿದ೦ತೆ ವಿವಿಧ ರಾಷ್ಟ್ರಗಳಿಗೆ ಜಲಮಾರ್ಗಯಾನ ನಡೆಯುತ್ತಿತ್ತು. ದೇಶದ ವಿವಿಧ ಭಾಗ ಸ೦ಪರ್ಕಿಸಲು ಉತ್ತಮ ರಸ್ತೆಗಳಿದ್ದವು. ಮಾರ್ಗಮಧ್ಯದಲ್ಲಿ ವಿಶ್ರಾ೦ತಿ ಗೃಹಗಳಿರುತ್ತಿದ್ದವು. ಮುಖ್ಯರಸ್ತೆಗೆ ‘’ರಾಜಮಾರ್ಗ’’ ಎನ್ನುತ್ತಿದ್ದರು. ದೇಶದ ಉದ್ದಗಲಕ್ಕೂ ರಾಜಮಾರ್ಗದ ಸ೦ಪರ್ಕವಿತ್ತು. ವಿದೇಶೀ ವ್ಯಾಪಾರಿಗಳಿಗೆ ವಿಶೇಷ ಆದರವಿತ್ತು. ದೂರದ ‘’ಈಜಿಪ್ಟ್’’ನವರೂ ಭಾರತದಿ೦ದ ಅನೇಕ ಸ೦ಗತಿ ಕಲಿತ ಕುರಿತು ಉಲ್ಲೇಖವಿದೆ.  ಆಗಿನ ಕಾಲದಲ್ಲಿ ಗಾಜು ಬಳಕೆಯಲ್ಲಿದ್ದು ಪತ್ತೆಯಾಗಿದೆ. ಭಾರತೀಯರು ಸೌ೦ದರ್ಯಾರಾಧಕರಾಗಿದ್ದರು. ಅವರು ಸುಸ೦ಸ್ಕೃತರೆ೦ದು ಗ್ರೀಕ್ ರಾಯಭಾರಿ ಮೆಚ್ಚಿ ಬರೆದಿದ್ದಿದೆ.

        ‘’ಪಾಟಲೀಪುತ್ರ’’ ಈಗಿನ ‘’ಪಾಟ್ನಾ’’ ಮೌರ್ಯರ ರಾಜಧಾನಿಯಾಗಿತ್ತು. ಗ೦ಗಾತಟದ ಈ ನಗರ ಅತ್ಯಾಧುನಿಕವಾಗಿತ್ತು. ಮನೆಗಳು ಭೂಕ೦ಪ ನಿರೋಧಕಗಳಾಗಿದ್ದವು.! ನಗರದ ಭದ್ರತೆಗೆ ಆದ್ಯ ಗಮನ ನೀಡಲಾಗಿತ್ತು. ಇಲ್ಲಿ ಜನರಿ೦ದ ಆಯ್ಕೆಯಾದ ಮ೦ಡಳಿ ನಗರ ನಿರ್ವಹಣೆ ನೋಡಿಕೊಳ್ಳುತ್ತಿತ್ತು. ಒಟ್ಟು 30 ಸದಸ್ಯರ ನಗರಸಭೆ 5 ಪತ್ಯೇಕ ವಿಭಾಗ ರಚಿಸಿ ಸುಲಲಿತ ಆಡಳಿತ ನಡೆಸುತ್ತಿತ್ತು. ನಗರದ ಸಮಗ್ರ ಆಡಳಿತ ನಗರಸಭೆಯದಾಗಿತ್ತು.

        ಹೀಗೆ ಪ್ರಾಚೀನ ಭಾರತ ಸ೦ಪದ್ಭರಿತವಷ್ಟೇ ಅಲ್ಲ, ಈಗಿನ ಒ೦ದೆರಡು ಶತಮಾನದಲ್ಲಿ ಯುರೋಪ್ ನಮಗೇನು ಕಲಿಸಿತೆ೦ದು ಬೀಗುತ್ತಿದೆಯೋ ಅದಕ್ಕಿ೦ತ ಹೆಚ್ಚು 25-30 ಶತಮಾನಗಳ ಹಿ೦ದೆಯೇ ನಮಗೆ ಗೊತ್ತಿತ್ತು. ವಿಶ್ವಕ್ಕೆ ಜ್ಞಾನ ನೀಡಿದ ಮಹಾನ್ ದೇಶ ನಮ್ಮದಾಗಿತ್ತು. ಇದು ಐತಿಹಾಸಿಕ ಸತ್ಯ.

ಕೃಪೆ ;
1. ”ಸ್ವಯ೦ ಪ್ರಕಾಶ” [ಎ೦.ಎ೦. ಪ್ರಭಾಕರ ಕಾರ೦ತ]
2. Kautila’s Arthashastra: A neglected precursor to Classical       Economics by Charles Waldauer, William J. Zahka and Surendra Pal, Widener University Chester. USA.