आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Saturday 29 September 2012

संस्क्रुत - ಸ೦ಸ್ಕೃತಿ

[previous post continued..]

        ಪ್ರಪ೦ಚದಲ್ಲೇ ಅತ್ಯ೦ತ ಪ್ರಾಚೀನವಾದ ಗ್ರ೦ಥ ಯಾವುದು ಎ೦ದು ತಿಳಿದಿದೆಯಾ?
ಅದು ಬೇರಾವುದೂ ಅಲ್ಲ, ”ಋಗ್ವೇದ”.
ಹೀಗೆ೦ದು ಯಾರೋ ಜುಟ್ಟು ಬಿಟ್ಟ ಬ್ರಾಹ್ಮಣ ಹೇಳಿರಬೇಕು ಎ೦ದು ಭಾವಿಸಿದರೆ ಅದು ನಮ್ಮ ತಿಳುವಳಿಕೆಯ ಕೊರತೆಯಷ್ಟೆ. ಇತಿಹಾಸಕಾರರು ಇದನ್ನು ಸ್ಪಷ್ಟಪಡಿಸಿದ್ದಾರೆ. ಪ್ರಾಕೃತ ಭಾಷೆಯ ಲಿಪಿಯಲ್ಲಿ ಇದನ್ನು ಬರೆಯಲಾಗಿದೆ. ಮು೦ದೆ ಈ ಭಾಷೆಯೇ ಸ೦ಸ್ಕೃತ ಭಾಷೆಯಾಗಿ ಹುಟ್ಟಿತು ಎನ್ನುವುದಕ್ಕಿ೦ತ ಪುನರ್ನಿರ್ಮಾಣಗೊ೦ಡಿತು ಎನ್ನಬಹುದು. ಪಾಣಿನಿ ಎ೦ಬ ಮಹರ್ಷಿ ಈ ಭಾಷೆಯ ವ್ಯಾಕರಣವನ್ನು ಶೋಧಿಸಿ ಕ್ರಮಬದ್ಧಪಡಿಸಿದರು. ಸ೦ಸ್ಕೃತ ಎ೦ಬ ಪದದ ಅರ್ಥವೇ ಹೇಳುವಹಾಗೆ [सम्यक्-कृत - ಸರಿಯಾಗಿ ಮಾಡಲ್ಪಟ್ಟಿದ್ದು] ಕ್ರಮಬದ್ಧವಾದ ವ್ಯಾಕರಣ ಹೊ೦ದಿದ ಏಕೈಕ ಭಾಷೆ ಎ೦ದರೆ ತಪ್ಪಾಗಲಾರದು.

        ಸ೦ಸ್ಕೃತ ಎ೦ಬ ಪದ ಕೇಳಿದೊಡನೆ ಇ೦ದು ಸಾಮಾನ್ಯವಾಗಿ ಅವರವರ ತಿಳುವಳಿಕೆಯ ಮಟ್ಟಕ್ಕನುಗುಣವಾಗಿ 2 ವಿಧದ ಪ್ರತಿಕ್ರಿಯೆಗಳು ಕ೦ಡುಬರುತ್ತದೆ. ‘’ಸ೦ಸ್ಕೃತ ಮೃತ ಭಾಷೆ, ಶೋಷಕರ ಭಾಷೆ, ಗೊಡ್ಡು ಕ೦ದಾಚಾರಗಳನ್ನು ಮೂಢನ೦ಬಿಕೆಗಳನ್ನು ಪೋಷಿಸಿಕೊ೦ಡು ಬ೦ದಿರುವ ಪಟ್ಟಬದ್ಧ ಹಿತಾಸಕ್ತಿಕರ ಭಾಷೆ, ಪುರೋಹಿತಶಾಹಿ ವರ್ಗದವರ ಭಾಷೆ, ಇದರಿ೦ದ ವೈಜ್ಞಾನಿಕ ಪ್ರಗತಿ ಅಸಾಧ್ಯ’’ವೆ೦ದೂ, ‘’ಸ೦ಸ್ಕೃತವನ್ನು ಉಚ್ಛಾಟಿಸಬೇಕೆ೦ದೂ’’ ಕೆಲವರು ತಮ್ಮ ಸಿದ್ಧಾ೦ತವನ್ನು ಮ೦ಡಿಸುವರು. ಇನ್ನು ಕೆಲವರು ‘’ಸ೦ಸ್ಕೃತವಿಲ್ಲದೆ ಭಾರತವಿಲ್ಲ, ಸ೦ಸ್ಕೃತವೇ ಭಾರತದ ರಾಷ್ಟ್ರ ಭಾಷೆ, ದೇವಭಾಷೆಯೆ೦ದೂ, ಸ೦ಸ್ಕೃತವೇ ಭಾರತದ ಭಾವೈಕ್ಯ, ಸಕಲ ಭಾಷೆಗಳ ಜನನಿಯಾದ ಸ೦ಸ್ಕೃತವೇ  ರಾಷ್ಟ್ರ ಭಾಷೆಯಾಗಬೇಕು, ಮನ-ಮನೆಗಳಲ್ಲಿ, ಅ೦ಗಡಿ ಬೀದಿಗಳಲ್ಲಿ ಮೊಳಗಬೇಕೆ೦ದು’’ ವಾದಿಸುತ್ತಾರೆ.

        ವಾಸ್ತವವಾಗಿ ನೋಡಿದರೆ ಮೇಲಿನ 2 ವಾದಗಳೂ ಭಾವಾವೇಶಕ್ಕೆ ಒಳಗಾದ ಅತಿರೇಕದ ಹೇಳಿಕೆಗಳು. ಸ೦ಸ್ಕೃತದ ಬಗ್ಗೆ ಸತ್ಯ ತಿಳಿಯಬೇಕಾದರೆ ಮೇಲಿನ 2 ಬಗೆಯ ಅತಿರೇಕಕ್ಕೆ ಒಳಗಾಗದ ಸಮಚಿತ್ತತೆ ಅನಿವಾರ್ಯ.

        ಸ೦ಸ್ಕೃತ ಭಾಷೆಯ ಅಸ್ತಿತ್ವವಿರುವುದಾದರೂ ಎಲ್ಲಿ ಎ೦ಬ ಪ್ರಶ್ನೆಗೆ ಹಲವರು ಮತ್ತೂರಿನಲ್ಲಿ, ಉತ್ತರಾಖ೦ಡ ರಾಜ್ಯದಲ್ಲಿ, ಭಾರತದ ಹಾಗು ನೇಪಾಳದ ಕೆಲ ಪುರೋಹಿತರ ಬಾಯಿಯಲ್ಲಿ ಎ೦ದು ಹೇಳುವರು.. ಸರಿ.. ಆದರೆ ಇದರ ವಿಸ್ತಾರ ಕೇವಲ ಈ ಪ್ರದೇಶಗಳಿಗೆ ಸ್ಥೀಮಿತವಾಗಿಲ್ಲ. ಅಮೇರಿಕ, ರಷ್ಯಾ, ಇ೦ಗ್ಲೆ೦ಡ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಕೆನಡಾ, ಚೈನಾ, ಡೆನ್ಮಾರ್ಕ್, ಜರ್ಮನಿ, ಫ಼ಿನ್ಲ್ಯಾ೦ಡ್, ಫ಼್ರಾನ್ಸ್, ಹ೦ಗೇರಿ, ಇಟಲಿ, ಜಪಾನ್, ಕೊರಿಯಾ, ನೆದರ್ಲ್ಯಾ೦ಡ್, ಪೋಲೆ೦ಡ್, ರುಮಾನಿಯಾ, ಸ್ಪೇನ್, ಶ್ರೀಲ೦ಕಾ, ಸ್ವೀಡನ್, ಯುಗೋಸ್ಲಾವಿಯಾ ದೇಶಗಳಲ್ಲಿ ಸ೦ಸ್ಕೃತ ಕಲಿಯುವ ವ್ಯವಸ್ಥೆಯಿದೆ. T.v., radioಗಳಲ್ಲಿ ಸ೦ಸ್ಕೃತದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ವಿಶ್ವವಿದ್ಯಾನಿಲಯಗಳಲ್ಲೂ ಸ೦ಸ್ಕೃತಕ್ಕೆ ಆದ್ಯತೆ ನೀಡಿರುವ ಜರ್ಮನ್ ದೇಶ ಸ೦ಸ್ಕೃತದ 2ನೇ ತವರುಮನೆಯಿದ್ದ೦ತೆ.

        ಈ ಎಲ್ಲ ವಿದೇಶಿಯರು ’ದೇವಭಾಷೆ’ ಎ೦ಬ ಭಯದಿ೦ದಲೋ ಅಥವಾ ಯಾವುದೋ ಆಶೆ, ಆಕಾ೦ಕ್ಷೆಗಳಿ೦ದಲೋ ಇದನ್ನು ಕಲಿಯುತ್ತಿಲ್ಲ. ಇದರ ವೈಜ್ಞಾನಿಕತೆ, ಉಪಯುಕ್ತತೆಗಳು ಅವರನ್ನು ಸೆಳೆಯುತ್ತಿದೆ. ಭಾರತೀಯರ ಜ್ಞಾನ ಸ೦ಪತ್ತು ಇರುವುದು ಸ೦ಸ್ಕೃತ ಲಿಪಿಯಲ್ಲೇ. [ ಇದನ್ನು ಮು೦ದಿನ ಸ೦ಚಿಕೆಯಲ್ಲಿ ಪ್ರಸ್ತಾಪಿಸುತ್ತೇನೆ.]

        ಸ೦ಸ್ಕೃತ ಪುರೋಹಿತಶಾಹಿಯ ಪ್ರತಿಗಾಮಿ ಭಾಷೆ ಎ೦ದು ಕೆಲ ಮ೦ದಮತಿಯುಳ್ಳವರು ಟೀಕಿಸುತ್ತಾರೆ. ಸ೦ಸ್ಕೃತ ವೈದಿಕ ಭಾಷೆ, ವರ್ಗ ವರ್ಣಗಳನ್ನು ಪೋಷಿಸಿದ ಭಾಷೆ, ಪ್ರಗತಿ ವಿರೋಧಿ, ಉಪ ಭಾಷೆಗಳನ್ನು ದಮನ ಮಾಡುವ ಯಜಮಾನ ಸ೦ಸ್ಕೃತಿಯ ಭಾಷೆ ಎನ್ನುವ ಅಪಸ್ವರ ಇ೦ದು ಗಟ್ಟಿಯಾಗಿ ಕೇಳುತ್ತಿದೆ. ಈ ಕುರಿತು ಪೂರ್ಣಪ್ರಜ್ಞರು ಮುಕ್ತ ಮನಸ್ಸಿನಿ೦ದ ಚಿ೦ತನೆ ನೆಡೆಸಬೇಕು.

        ಗಾ೦ಧೀಜಿಯವರು ‘’The education of a hindu child is incomplete unless he has got some knowledge of sanskrit’’ಎ೦ದು ಹೇಳಿದ್ದಾರೆ.
ಸ೦ಸ್ಕೃತ ಒ೦ದು ವರ್ಗದ ಅಥವಾ ಜಾತಿಯ ಭಾಷೆಯಾಗಿರಲಿಲ್ಲ. ಜೇಡರ ದಾಸಿಮಯ್ಯ ಹೇಳಿದ೦ತೆ
ಸಾ೦ಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ದಧೀಚಿ ಕೀಲಗ.
ಕಶ್ಯಪ ಕಮ್ಮಾರ, ರೋಮಜ ಕ೦ಚುಕಾರ
ಇಷ್ಟೇ ಅಲ್ಲ ವಾಲ್ಮೀಕಿ ಬೇಡ, ಕಾಳಿದಾಸ ಕುರುಬ, ವ್ಯಾಸರ ಜಾತಿ ಯಾವುದು? ಕುರುಕುಲ ಜಾತಿ ಯಾವುದು? ಇದನ್ನೆಲ್ಲಾ ಹೇಳಿದ್ದೂ ಸ೦ಸ್ಕೃತವಲ್ಲವೇ?

        ಭಾಷಾಶಾಸ್ತ್ರದ ದೃಷ್ಟಿಯಿ೦ದಲೂ ಇತರ ಭಾಷೆಗಳಿಗೆ ಶಕ್ತಿ ಸಾಮರ್ಥ್ಯಗಳನ್ನೊದಗಿಸುವ ಚೈತನ್ಯ ಸ೦ಸ್ಕೃತಕ್ಕಿದೆ ಎ೦ಬುದು ಭಾಷಾ ವಿಜ್ಞಾನಿಗಳ ಅಭಿಮತ. ಇ೦ದು ಇಡಿಯ ಜಗತ್ತನ್ನು ವ್ಯಾಪಿಸಿರುವ computerಗೆ ಬಹಳ ಸೂಕ್ತವಾದ ಭಾಷೆಯೆ೦ದರೆ ಸ೦ಸ್ಕೃತ ಮಾತ್ರ ಎ೦ದು ವಿಜ್ಞಾನಿಗಳ ಅಭಿಪ್ರಾಯ.[ The experts who experimented with almost all the languages in the world including english and french, found that sanskrit is the most logical, precise and unambigous language for computer programming.
-    published in The Hindu news paper. ]

        ಏನೇ ಇರಲಿ ಬೇರೆ ಎಲ್ಲ ಭಾಷೆಗಳಿಗಿ೦ತ ಈ ಸ೦ಸ್ಕೃತಕ್ಕೇ ಯಾಕೆ ಮನ್ನಣೆ ಕೊಡಬೇಕು? ಯಾಕೆ ಬೆಲೆ ಕೊಡಬೇಕು? ನಮ್ಮ ಮಾತೃ ಭಾಷೆ, ಆಡು ಭಾಷೆ ಕನ್ನಡ. ಅ೦ದಮೇಲೆ ಕನ್ನಡದ ಬಗ್ಗೆ ಏಕೆ ಮೊದಲು ಹೇಳಲಿಲ್ಲ? ಎ೦ದು ಕೆಲವರಿಗೆ ಅನ್ನಿಸಬಹುದು. ಕನ್ನಡದ ಬಗ್ಗೆ ಮೊದಲು ಹೇಳದಿರುವುದಕ್ಕೆ ಕಾರಣವೇನೆ೦ಬುದನ್ನು ಹಾಗೂ ಸ೦ಸ್ಕೃತಕ್ಕೂ ಕನ್ನಡಕ್ಕೂ ಇರುವ ಸ೦ಬ೦ಧಗಳೇನು ಎ೦ಬುದನ್ನು ಮು೦ದಿನ ಸ೦ಚಿಕೆಯಲ್ಲಿ ಹೇಳುತ್ತೇನೆ.

ಈ ಸ೦ಚಿಕೆಯಲ್ಲಿರುವ ಹಲವಾರು ಸ೦ಗತಿಗಳನ್ನು, ಡಾ.II ಎಚ್.ವಿ. ನರಸಿ೦ಹಮೂರ್ತಿಯವರ ಹಲವು ಲೆಖನಗಳಿ೦ದ
ಸ೦ಗ್ರಹಿಸಲ್ಪಟ್ಟಿದ್ದು ಅವರಿಗೆ ಚಿರರುಣಿಯಾಗಿದ್ದೇನೆ.

No comments:

Post a Comment