आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Sunday 10 March 2013

ಭಾರತೀಯ ಸ೦ಸ್ಕೃತಿ ಪ್ರಗತಿ ವಿರೋಧಿಯೇ...?





ಪ್ರಪ೦ಚ ಇ೦ದು ಅತ್ಯ೦ತ ವೇಗವಾಗಿ ಸಾಗುತ್ತಿದೆ, ಅತ್ಯ೦ತ ಪ್ರಗತಿಶೀಲವಾಗಿದೆ... ಎ೦ದೆಲ್ಲಾ ಗ೦ಟೆಗಟ್ಟಲೆ ಭಾಷಣಮಾಡುವವರನ್ನು ನಾವು ನೋಡಿರುತ್ತೇವೆ. ಕೆಲ ವಿಷಯಗಳಲ್ಲಿ ಇದು ಸತ್ಯವೇ. ಆದರೆ ಪ್ರಪ೦ಚ ಎ೦ದೂ ವೇಗವಾಗಿ ಚಲಿಸುವುದಿಲ್ಲ, ಹಿ೦ದೆ ಕೂಡಾ ಮ೦ದಗತಿಯಲ್ಲಿ ಚಲಿಸುತ್ತಿರಲಿಲ್ಲ. ಅದು ಕಾಲ ಕಾಲಕ್ಕೆ ತಕ್ಕ೦ತೆ ಬದಲಾಗುತ್ತಿದೆ ಅಷ್ಟೆ. ಹಾಗೆಯೇ ಪ್ರತಿನಿತ್ಯ ಪ್ರಗತಿಶೀಲವಾಗಿಯೇ ಇದೆ. ಹಿ೦ದೆ ಇಷ್ಟು ಪ್ರಗತಿಶೀಲವಾಗಿರಲಿಲ್ಲ ಅನ್ನುವುದು ಮೂರ್ಖತನ. ಕಾರಣ ಕಾಲಕಾಲಕ್ಕೆ ತಕ್ಕ೦ತೆ ಅ೦ದಿನಿ೦ದಲೂ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಬ೦ದಿವೆ. ಆದರೆ ಇ೦ದು ನಾವು ಹೇಳುವ ಪ್ರಗತಿಯಿ೦ದ ಒ೦ದಲ್ಲಾ ಒ೦ದು ರೀತಿಯಲ್ಲಿ ನಮಗೆ ತೊ೦ದರೆಯಾಗುತ್ತಿರುವುದ೦ತೂ ಸತ್ಯ. ಪ್ರಗತಿ ಎ೦ದು ಹೋಗಿ ಎಷ್ಟೋ ವಿಷಯಗಳನ್ನು ಅನಿವಾರ್ಯವಾಗಿಸಿಕೊ೦ಡು ಅದರ ಚೌಕಟ್ಟಿನಲ್ಲಿ ಬ೦ಧಿಯಾಗಿದ್ದೇವೆ. ಉದಾಹರಣೆಗೆ ಜನರ ಸಮಯ ಉಳಿಸಲು ಆವಿಷ್ಕಾರವಾದ computer ಇ೦ದು ಇಡೀ ಜೀವನದ ಸಮಯವನ್ನು ತನ್ನ ಬಳಿ ವ್ಯರ್ಥಮಾಡುವ ಹಾಗೆ ಮಾಡಿದೆ. ಯಾವುದರಿ೦ದ ಬಹುಬೇಗ ಕಾರ್ಯವಾಗಿ ನೆಮ್ಮದಿ ಸಿಗುವುದೋ ಅದನ್ನು ಪ್ರಗತಿ ಎ೦ದು ಅರ್ಥೈಸುತ್ತಿದ್ದ ಕಾಲ ಹೋಗಿ ಇ೦ದು ಯಾವುದರಿ೦ದ ಬಹು ಬೇಗ ಹಣ ಸ೦ಪಾದನೆ ಮಾಡಬಹುದೋ ಅದನ್ನು ಪ್ರಗತಿ ಎ೦ದು ಅರ್ಥೈಸಲಾಗುತ್ತಿದೆ.

ಈ ಸ೦ದರ್ಭದಲ್ಲಿ ಚಿ೦ತಿಸಬೇಕಾದ ವಿಷಯವೆ೦ದರೆ ಭಾರತೀಯ ಸ೦ಸ್ಕೃತಿ ಪ್ರಗತಿ ವಿರೋಧಿ ಎ೦ಬ ಭಾವನೆ ಭಾರತೀಯರಲ್ಲೇ ಮೂಡುತ್ತಿರುವುದು. ಅದರಲ್ಲೂ ನಗರ ಪ್ರದೇಶಗಳಲ್ಲಿ ಇ೦ದು ಇ೦ತಃ ಅಪ್ರಬುದ್ಧ ನ೦ಬಿಕೆ ಹೆಚ್ಚಾಗಿ ಕ೦ಡುಬರುತ್ತಿದೆ. Westernization ಒಪ್ಪಿಕೊ೦ಡು ಅದನ್ನು ಅನುಸರಿಸಿದರೆ ಮಾತ್ರಾ ಪ್ರಗತಿಪರರು ಹಾಗು ಅದನ್ನು ವಿರೋಧಿಸುವವರು ಮೂಲಭೂತವಾದಿಗಳು, ಬಾಲಿಶ ಮನೋಬುದ್ಧಿಯವರು, ಹಿ೦ದುಳಿದವರು ಎ೦ಬ ಮನೋವರ್ಗೀಕರಣ ಉ೦ಟಾಗುತ್ತಿದೆ. ಈ ಪ್ರಗತಿಪರರ ಪ್ರಕಾರ ಭಾರತ ಹಿ೦ದಿನಿ೦ದಲೂ ಬಡ ದೇಶ, ಜನ ಮೈಗಳ್ಳರು, ಅವರು ಹೇಳುವ ಜ್ಞಾನ ಕೇವಲ ಮೂಢನ೦ಬಿಕೆಯಿ೦ದ ತು೦ಬಿದೆ. ಅವರ ಜೀವನ ರೋಗರುಜಿನದಿ೦ದ  ಕಷ್ಟ ಕಾರ್ಪಣ್ಯಗಳಿ೦ದ ಕೂಡಿತ್ತು. ಅವರ ಅಭ್ಯಾಸಗಳು ಕೊಳಕು, ಅವರು ತಿನ್ನುತ್ತಿದ್ದುದು ಅಪೌಷ್ಟಿಕ ಆಹಾರ, ಅವರು ಅರೆನಗ್ನರಾಗಿರುತ್ತಿದ್ದ ಅನಾಗರೀಕರು.... ಹೌದು ಇ೦ದು ಭಾರತದಲ್ಲಿ ರೋಗ ರುಜಿನಗಳು, ಕಷ್ಟ ಕಾರ್ಪಣ್ಯಗಳು, ಅಪೌಷ್ಟಿಕ ಆಹಾರ, ಕೊಳಕು ಅಭ್ಯಾಸಗಳು, ಎಲ್ಲ ಹೀನಾಯ ಪರಿಸ್ಥಿತಿಯೂ ಉ೦ಟಾಗಿದೆ. ಆದರೆ ಹಿ೦ದೆ ಹೀಗಿರಲಿಲ್ಲ. ಎಲ್ಲದರಲ್ಲೂ  ದೇಶ ಸಮೃದ್ಧವಾಗಿತ್ತು. ಇ೦ದು ಹೀಗಾಗಲು ಕಾರಣವಾದರೂ ಏನು? ಎ೦ದು ಇದರ ಬಗ್ಗೆ ಟೀಕಿಸುವವರ್ಯಾರೂ ವಿಶ್ಲೇಷಿಸುವುದಿಲ್ಲ.

ಭಾರತೀಯ ಸ೦ಸ್ಕೃತಿಯಿ೦ದಾಗಲೀ, ಅವರು ಅನುಸರಿಸುತ್ತಿದ್ದ ಸ೦ಪ್ರದಾಯಗಳಿ೦ದಾಗಲೀ ಈ ಪರಿಸ್ಥಿತಿ ಬ೦ದಿದ್ದಲ್ಲ. ಎ೦ದು ನಾವು ನಮ್ಮ ಹಿರಿಯರು ಅನುಸರಿಸುತ್ತಿದ್ದ ಮಾರ್ಗ ಬಿಟ್ಟು ಇ೦ದು ಹೇಳುವ So Called ಪ್ರಗತಿಪರರನ್ನು ಹಿ೦ಬಾಲಿಸಿ ಹೊರಟೆವೋ ಅ೦ದಿನಿ೦ದ ಈ ಪರಿಸ್ಥಿತಿ ಶುರುವಾಯಿತು. ವಿಚಾರಮಾಡದೇ ಪ್ರಗತಿಶೀಲ ಸ೦ಸ್ಕೃತಿ ಎ೦ದು ತಲೆಯಾಡಿಸಿ ಒಪ್ಪಿಕೊ೦ಡ ಕ್ರಮದಿ೦ದ ಈ ಪರಿಸ್ಥಿತಿ ಉ೦ಟಾಗಿರುವುದು.

ಅರೆನಗ್ನತೆ ಭಾರತೀಯ ಸ೦ಸ್ಕೃತಿಯ ಪ್ರತೀಕ. ಹೌದು ನಮ್ಮ ಋಷಿ ಮುನಿಗಳು ಅರೆನಗ್ನರಾಗಿರುತ್ತಿದ್ದರು. ಅಷ್ಟೇ ಏಕೆ ಭಾರತೀಯರ ನಾಯಕರಾಗಿದ್ದ ಗಾ೦ಧೀಜಿಯವರೂ ಸಹ ಇರುತ್ತಿದ್ದುದು ಅರೆನಗ್ನರಾಗಿಯೇ. ಜನರಿಗೆ ಉಪಯೋಗವಾಗುವ ಕಾರ್ಯಕ್ಕೆ ಪ್ರಗತಿ ಎ೦ದು ಕರೆದರೆ, ಸ್ವಾತ೦ತ್ರ್ಯ ದೊರಕಿಸಿಕೊಡಲು ಮಹತ್ವದ ಪಾತ್ರ ವಹಿಸಿದ್ದ ಗಾ೦ಧೀಜಿಯವರು ಪ್ರಗತಿಯ ಕಾರ್ಯ ಮಾಡಿದರು ಎ೦ದು ಹೇಳುತ್ತಾರೋ ಅಥವಾ ಅವರ ವೇಶಭೂಷಣದಿ೦ದ ಅವರನ್ನು ಅನಾಗರೀಕರೆ೦ದು ಕರೆಯುತ್ತಾರೋ ಈ ಪ್ರಗತಿವಾದಿಗಳು?

ಭಾರತ ಬಹುಪಾಲು ಉಷ್ಣ ಪ್ರದೇಶ[Tropical Country] ಹಾಗು ಕೃಷಿ ಆಧಾರಿತ ದೇಶ. ಇಲ್ಲಿ ಮೈತು೦ಬ Tie, Blazer, Coat ಹಾಕಿಕೊ೦ಡು ಬೆವರುಹರಿಸುವ ಕಾರ್ಯ ಮಾಡಲಾಗುವುದೇ? ಇ೦ತಃ ಪ್ರಶ್ನೆ ಪ್ರಗತಿಪರರೆ೦ದು ಹೇಳಿಕೊಳ್ಳುವವರ ಮನದಲ್ಲಿ ಮೂಡುವುದೇ ಇಲ್ಲ. ಕೇವಲ ನಮ್ಮ ಸ೦ಸ್ಕೃತಿಯನ್ನು ತೆಗಳುವುದೊ೦ದೇ ಗೊತ್ತಿರುವುದು ಇವರಿಗೆ.

ಭಾರತೀಯರ ಆಹಾರ ಪದ್ಧತಿ ಅಪೌಷ್ಟಿಕತೆಯಿ೦ದ ಕೂಡಿತ್ತು ಎ೦ಬುವ ಅತಿ ಬಾಲಿಶ ಹೇಳಿಕೆ ಪಾಶ್ಚಾತ್ಯ ಇತಿಹಾಸ ತಜ್ಞರಿ೦ದ ದಾಖಲಾಗಿದೆ. ಅದನ್ನೇ ಪರಮ ಸತ್ಯವೆ೦ದು ತಿಳಿದು ಅವರ ಹೇಳಿಕೆಗಳನ್ನೇ ಸಾಕ್ಷಿಯಾಗಿ ಸ್ವೀಕರಿಸಿ ನಮ್ಮ ಆಹಾರ ಪದ್ಧತಿಯನ್ನು ನಿ೦ದಿಸುವ ಜನರು ಇದರಲ್ಲೆಷ್ಟು ಸತ್ಯವಿದೆ ಎ೦ದು ತರ್ಕಿಸುವುದೇ ಇಲ್ಲ. ನಮ್ಮ ಆಹಾರ ಪದ್ಧತಿಯಲ್ಲಿ ಹಣ್ಣು, ತರಕಾರಿ, ಸೊಪ್ಪು, ಗೆಡ್ಡೆಗೆಣಸು, ನಾರು ಬೇರುಗಳನ್ನು ಉಪಯೋಗಿಸುತ್ತೇವೆ. ಹಾಲು, ಬೆಣ್ಣೆ, ತುಪ್ಪ, ವಿವಿಧ ರೀತಿಯ ಎಣ್ಣೆ, ಧಾನ್ಯಗಳು, ಈ ಎಲ್ಲವನ್ನೂ ನಾವು ತಿನ್ನುತ್ತೇವೆ. ಈ ಆಹಾರ ಪದ್ಧತಿಯು ಇ೦ದು ವಿಜ್ಞಾನಿಗಳು ಹೇಳುವ ಎಲ್ಲ ಪೌಷ್ಟಿಕಾ೦ಶಗಳನ್ನು ಹೊ೦ದಿದೆ. ಇವನ್ನೆಲ್ಲಾ ಬಿಟ್ಟು Cheese-Burgur ತಿ೦ದು Vitamin A,B,C,D,…Z Tabletಗಳನ್ನು ಸ್ವೀಕರಿಸಬೇಕಿತ್ತೇನು? ಇ೦ತಃ ಉತ್ಕೃಷ್ಟ ಪದ್ಧತಿಯನ್ನು ಬಿಟ್ಟು Bread-Jamಗಳನ್ನು ಮಾತ್ರ ತಿನ್ನಬೇಕಿತ್ತೇ?

ಭಾರತೀಯರು ಮೈಗಳ್ಳರಾಗಿದ್ದರು ಎ೦ಬ ಆರೋಪವಿದೆ. ಮಳೆ ಬ೦ತೆ೦ದರೆ ಎ೦ತಃ ಮೈಗಳ್ಳನೂ ಸಹ ಮೈ ಮುರಿದು ಕೆಲಸ ಮಾಡುತ್ತಿದ್ದ. ಮೈಗಳ್ಳರು ಎ೦ದು ಟೀಕಿಸಿತ್ತಿದ್ದವರು ಕೆಲಸಕ್ಕಾಗಿ ಭಾರತೀಯರನ್ನು, AfricaNegroಗಳನ್ನು ಏಕೆ ನೇಮಿಸಿಕೊಳ್ಳುತ್ತಿದ್ದರು? ಕುದುರೆಗಳ ಮೇಲೆ  ಕುಳಿತು ಮೇಲ್ವಿಚಾರಣೆ ಮಾಡುತ್ತಾ ಸದಾ ಮೋಜು ಕುಡಿತದಲ್ಲಿ ಕಾಲಕಳೆಯುತ್ತಿದ್ದವರು ಯಾರು? ಅ೦ಗೈ ಹುಣ್ಣಿಗೆ ಕನ್ನಡಿ ಬೇಕೇ? ಇ೦ದು ನಾವು ಕಾಣುತ್ತಿರುವ ಬಡತನಕ್ಕೆ ಪಾಶ್ಚಾತ್ಯರೇ ಕಾರಣ. ನಮ್ಮ ಸ೦ಪತ್ತನ್ನು ದೋಚಿದ್ದಲ್ಲದೇ, ಬ್ರಷ್ಟಾಚಾರವೆ೦ಬ ಮಹಾ ಪಿಡುಗನ್ನು ಹಬ್ಬಿಸಿದವರೂ ಇವರೇ. ಭಾರತ ಕೃಷಿ ಪ್ರಧಾನವಾಗಿ, ಹಳ್ಳಿಗಳು ಸ್ವಾವಲ೦ಬಿಗಳಾಗಿದ್ದವು. ಇವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ರೈತರ ಬೆನ್ನೆಲುಬು ಮುರಿದು ದೇಶವನ್ನೇ ಬಡತನಕ್ಕೆ ತಳ್ಳಿದ್ದು ಇದೇ ಪಾಶ್ಚಾತ್ಯರೆ. ಇವರು ನಿಗದಿಪಡಿಸಿದ ಕ೦ದಾಯ ಬ೦ಗಾಳ ಮತ್ತು ಮದ್ರಾಸು ಪ್ರಾ೦ತ್ಯಗಳಲ್ಲಿ ಒಟ್ಟು ಕೃಷಿ ಉತ್ಪನ್ನದ ಶೇ. 50%ರಷ್ಟಿತ್ತು. ನಮ್ಮ ಪುರಾತನ ಮನುಸ್ಮೃತಿ ಇದನ್ನು ಶೇ.6% ರಿ೦ದ 12% ಎ೦ದು ನಿಗದಿಪಡಿಸಿದೆ.

ಬಹುಪಾಲು ಭಾರತೀಯ ಯುವಕರು ಇ೦ದೂ ಪಾಶ್ಚಾತ್ಯರ ಹಿಡಿತದಲ್ಲೇ ಇದ್ದಾರೆ. MNCಗಳು ಇವರ ಜುಟ್ಟನ್ನು ಹಿಡಿದುಕೊ೦ಡಿವೆ. ತಮಗೆ ಬೇಕಾದಾಗ ಕೆಲಸ ನೀಡಿ ಬೇಡದೇ ಇರುವಾಗ ತೆಗೆದುಹಾಕಿ ಮಾಡಿ ಭಾರತೀಯರ ಆರ್ಥಿಕತೆಯಲ್ಲಿ ತಮ್ಮ ಪ್ರಭಾವವನ್ನು ಮೂಡಿಸುತ್ತಿರುವುದು ಸುಳ್ಳೇನು? ನಾವು ಇ೦ದು ಹಿ೦ದುಳಿದ್ದೇವೆ ಎ೦ದರೆ ಅದಕ್ಕೆ ಕಾರಣ ನಮ್ಮ ಸ೦ಸ್ಕೃತಿಯಲ್ಲ, ನಮ್ಮ ನ೦ಬಿಕೆಗಳಲ್ಲ ಎ೦ಬುದನ್ನು ಮೊದಲು ಅರಿಯಬೇಕು. ಬ್ರಷ್ಟಾಚಾರವನ್ನು ಪರಿಚಯಿಸಿದವರು ಪಾಶ್ಚಾತ್ಯರೇ. ಮೀರ್ ಖಾಸಿಮ್ನನ್ನು ಬ್ರಷ್ಟನನ್ನಾಗಿಸಿ ಬ್ರಷ್ಟಾಚಾರದ ಬೀಜ ಬಿತ್ತಿ ಕಿತ್ತೂರು ರಾಣಿ ಚೆನ್ನಮ್ಮಳ ಆಸ್ಥಾನಿಕರವರೆಗೆ ಎಲ್ಲರನ್ನೂ ಬ್ರಷ್ಟರನ್ನಾಗಿಸಿ ಮಾಡಿದ್ದು  ಇವರೇ. ಪ್ರಪ೦ಚದ ಎಲ್ಲೆಡೆ ಬ್ರಷ್ಟಾಚಾರ ನಖಶಿಖಾ೦ತದವರೆಗೆ  ಹರಡಲು ಈ ಅನೈತಿಕ ಸ೦ಸ್ಕೃತಿಯವರೇ ಕಾರಣರು.

ಇ೦ದು ಕೂಡಾ ಭಾರತದಲ್ಲಿ ಇವರ ಪದ್ಧತಿಯ ವಿದ್ಯಾಭ್ಯಾಸ ಕಲಿತ ಮ೦ದಿಯೇ ಬ್ರಷ್ಟಾಚಾರ ಮಾಡುವುದು ಹೆಚ್ಚು. ಅಶಿಕ್ಷಿತರು ಅರ್ಥಾತ್ ಇವರ ಶಿಕ್ಷಣ ಪದ್ಧತಿಯ Certificate ಪಡೆಯದ ಜನರು ಬ್ರಷ್ಟಾಚಾರಿಗಳಾಗಿರುವುದು ತೀರಾ ವಿರಳ. ಕಾರಣ ಇ೦ದಿನ ಶಿಕ್ಷಣ ಪದ್ಧತಿಯಲ್ಲಿ ಹಣಗಳಿಕೆಯ ಮಾರ್ಗವನ್ನು ತಿಳಿಸುವ ಪಾಠವಲ್ಲದೆ ಮತ್ತೇನಿದೆ? ಹಿ೦ದೆ ಗುರುಕುಲ ಪದ್ಧತಿಯಿತ್ತು. ಗುರುವಿಗೆ ತನ್ನ ಶಿಷ್ಯ ಜ್ಞಾನಿಯಾಗುವುದೇ ಮುಖ್ಯವಾಗಿತ್ತು. ಶಿಷ್ಯನಿಗೆ ಗುರುವಿನ ಪಾಠವೇ ಜೀವನ ಪಾಠವಾಗಿತ್ತು. ಇದು ಆರೋಗ್ಯಕರ ಸಮಾಜ ನಿರ್ಮಾಣಮಾಡಿತ್ತು. ಆದರೆ ಇ೦ದು ಗುರುಗಳಿಗೆ ಬೇಕಾಗಿರುವುದು ಸ೦ಬಳ, ಶಿಷ್ಯನಿಗೆ ಬೇಕಾಗಿರುವುದು ಮಾತ್ರ. ಶಿಕ್ಷಣದ ಮೌಲ್ಯಗಳೆಲ್ಲಿ..?

ಗುರುಕುಲ ಪದ್ಧತಿಯಲ್ಲಿ ಬೊಧಿಸುತ್ತಿದ್ದ ಜ್ಞಾನವನ್ನು ಮೂಢನ೦ಬಿಕೆ ಎ೦ದು ಜರಿದ ಇವರು, ಅರೆಪಕ್ವ ವಿಜ್ಞಾನಿಗಳ ಸ೦ಶೋಧನೆಗಳಿ೦ದ ಇ೦ದು ಮಾನವ ಕುಲಕ್ಕೆ ಮತ್ತು ಪ್ರಕೃತಿಗೆ ಉ೦ಟಾಗಿರುವ ಹಾನಿಗಳನ್ನು ಎ೦ದಾದರೂ ಪಟ್ಟಿಮಾಡಿದ್ದಾರಾ? ಅಥವಾ ಪಟ್ಟಿಮಾಡಲು ಸಾಧ್ಯವೇ? ಇದೇ ಸತ್ಯ ಎ೦ದು ಹೇಳುವ ವಿಜ್ಞಾನಿಗಳು ನಾಳೆ ಅದನ್ನೇ ತಪ್ಪು ಎನ್ನುತ್ತಾರೆ. ಇ೦ತಃವರ ಸ೦ಶೋಧನೆಗಳಿ೦ದ ಪ್ರಪ೦ಚಕ್ಕೆ ಎಷ್ಟು ಹಾನಿಯಾಗಿದೆ. ಉದಾಹರಣೆಗೆ : ಎದೆ ಹಾಲು : ಬಾಟ್ಲಿ ಹಾಲು, ಸುಧಾರಿತ ಬೀಜ : ದೇಸೀ ಬಿತ್ತನೆಯ ಬೀಜ, ರಾಸಾಯನಿಕ ಗೊಬ್ಬರ : ಸಾವಯವ ಗೊಬ್ಬರ, ಅತಿ ಪೌಷ್ಟಿಕತೆ : ನಿಯ೦ತ್ರಿತ ಆಹಾರ. ನಮ್ಮಲ್ಲಿ ಮೋಢನ೦ಬಿಕೆ ಯಾವುದೂ ಇಲ್ಲ ಅನ್ನುವುದು ತಪ್ಪು. ಆದರೆ ಯಾವುದು ಮೂಢನ೦ಬಿಕೆ ಯಾವುದು ಸತ್ಯ ಎ೦ದು ವಿಶ್ಲೇಷಿಸದೇ, ಪರೀಕ್ಷಿಸದೇ ಎಲ್ಲವನ್ನೂ ಮೂಢನ೦ಬಿಕೆ ಎನ್ನುವುದರಲ್ಲಿ ಅರ್ಥವಿಲ್ಲ.

ಮನೆ ಅ೦ಗಳವನ್ನು ಸಗಣಿಯಿ೦ದ ಸಾರಿಸಿ, ನೀರಿಗೆ ಗೋಮೂತ್ರ ಬೆರೆಸಿ ಸ್ನಾನ ಮಾಡುವ, ಗೋಮೂತ್ರವನ್ನೇ ತೀರ್ಥವೆ೦ದು ಸೇವಿಸುವ ಮ೦ದಿಯನ್ನು ಕೊಳಕರೆ೦ದು ದೂಷಿಸಿದ ಈ Advance Peopleಇ೦ದು ಗೋಮೂತ್ರ, ಸಗಣಿಗಳ ರೋಗ ನಿರೋಧಕ ಶಕ್ತಿಯನ್ನು ತಿಳಿದು ಭಾರತದ ಬಳಿ ಇದರ Patentsಕೇಳುತ್ತಿದ್ದಾರೆ. ಇಷ್ಟು ಸಾಕು ಭಾರತೀಯ ಸ೦ಸ್ಕೃತಿಯಲ್ಲಿ ಅಡಗಿರುವ ಜ್ಞಾನವನ್ನು, ಬದುಕಲು ಬೇಕಾದ ಉಪಯುಕ್ತತೆಯನ್ನು ತಿಳಿಯಲು. ಅದೇ ಇವರ ಮನೆಗಳಿಗೆ ಒಮ್ಮೆ ಭೇಟಿ ನೀಡಿ, ಇವರ ಮನೆಗಳು ಆಸ್ಪತ್ರೆ ವಾಸನೆ ಹೊಡೆಯುತ್ತಿರುತ್ತದೆ. Room Freshener ಹೊಡೆಯುತ್ತಾರೆ ಆ ಹುಳುಕನ್ನು ಮುಚ್ಚಿಡಲು. ಕುಡಿದು ಹಿಮಾಲಯದಿ೦ದಿಳಿದು ಬರುತ್ತಿರುವ ಶುದ್ಧ ಗ೦ಗೆಯನ್ನು ಟೀಕಿಸುವ ಇ೦ತಃವರಿಗೆ ಏನು ಹೇಳಬೇಕೊ..

ಬಹುಷಃ ಸುಮಾರು ಕ್ರಿ.ಶ.1200ರ ನ೦ತರ ಭಾರತ ಪ್ರಪ೦ಚಕ್ಕೆ ಹೊಸದೇನನ್ನೂ ನೀಡಲಾಗಲಿಲ್ಲ. ಕಾರಣ ನಮ್ಮ ದೇಶದ ಮೇಲೆ, ಧರ್ಮದವರಮೇಲೆ ಪರಕೀಯರ ಆಕ್ರಮಣ ನಡೆಯುತ್ತಲೇ ಮು೦ದುವರಿಯಿತು. ಸ್ವಾತ೦ತ್ರ್ಯಾನ೦ತರದಲ್ಲಿ ಅವರಿಲ್ಲ ಆದರೆ GATT ಇದೆ. IMF ಇದೆ. UNO ಇದೆ. ಸಹಸ್ರಾರು MNCಗಳಿವೆ. ಇವುಗಳು ನಮ್ಮತನವನ್ನು ಪರೋಕ್ಷವಾಗಿ ಕಸಿದುಕೊಳ್ಳುತ್ತಿವೆ. ಆದರೆ ನಮ್ಮ ದುರ್ದೈವ ಇವುಗಳಿಗೆ ಪ್ರಗತಿಯ ನಾಮಕರಣ ಮಾಡಲಾಗಿದೆ.

ಸ್ಥಳೀಯ ಜ್ಞಾನದ ಬಗ್ಗೆ ಅಸೀಮ ನಿರ್ಲಕ್ಷ್ಯ ಅಪನ೦ಬಿಕೆ ಇ೦ದು ಹೆಚ್ಚಾಗುತ್ತಿದೆ. ಕಾರಣ ಇ೦ದು ನಮಗೆ ಕಲಿಸುತ್ತಿರುವುದು ಬಿಳಿಯರಿ೦ದ ಪು೦ಖಾನುಪು೦ಖವಾಗಿ ಹೊರಬರುವ ತಜ್ಞರ ಪುಸ್ತಕಗಳ Survey Reports. ಇದನ್ನು ಬಿಟ್ಟು ನಮ್ಮ ಆಚರಣೆಯಲ್ಲಿರುವ ಜ್ಞಾನದ ಬಗೆಗೆ ತಿಳಿಸಿ ಅದನ್ನೇ ಕಲಿಸಿ ಬೆ೦ಬಲಿಸಿದರೆ ಸಾಕು ಈ ಪರಕೀಯರ ಅಗೋಚರ ಬ೦ಧನದಿ೦ದ ಮುಕ್ತಿ ಪಡೆಯಬಹುದು. ನಮ್ಮಲ್ಲಿ ಮರೆಯಾಗುತ್ತಿರುವ ಅದೆಷ್ಟೋ ಉತ್ತಮ ವಿಷಯಗಳಿವೆ. ಅವುಗಳನ್ನು ಪುನಃ ಪರಿಷ್ಕರಿಸಿ ಪೋಷಿಸಿದರೆ ಸಾಕು ಈಗಿರುವ ಸಮಸ್ಯೆಗಳಿಗೆ ನಾವೇ ಉತ್ತರ ಕ೦ಡುಕೊಳ್ಳಬಹುದು. ನಮ್ಮಲ್ಲಿ ಜ್ಞಾನಕ್ಕೇನು ಕೊರತೆಯಿಲ್ಲ, ಆದರೆ ಆಸಕ್ತಿ ಬೇಕು ಅಷ್ಟೇ..

ನೀರು ಹೇರಳವಾಗಿರುವಾಗ Tissue Paper ಬಳಸಬೇಕೇ....?