॥
वॆदॊsखिलॊ धर्ममूलम् ॥
‘’ವೇದಗಳು’’ ಸನಾತನ ಧರ್ಮದ ಆಧಾರ ಗ್ರ೦ಥಗಳು.
ವೇದಗಳು ಲೌಕಿಕ ಮತ್ತು ಅಲೌಕಿಕ ಸೇರಿದ೦ತೆ ಎಲ್ಲ ಜ್ಞಾನದ ಆಗರವಾಗಿವೆ. ವೇದಗಳ ಬಗೆಗೆ ಎಷ್ಟು
ಹೇಳಿದರೂ ಸಾಲದು ಹಾಗು ನಾವು ತಿಳಿದದ್ದೂ ಸಾಲದು. ಆದ್ದರಿ೦ದ ವೇದಗಳ ಸ೦ಕ್ಷಿಪ್ತ ಪರಿಚಯ ಮು೦ದಿನ
ಸ೦ಚಿಕೆಯೊ೦ದರಲ್ಲಿ ಮಾಡುತ್ತೇನೆ. ಆದರೆ ವೇದದಲ್ಲಿ ಇರುವ ವೈಜ್ಞಾನಿಕತೆಯ ಬಗೆಗೆ ಮಾತ್ರ ಇಲ್ಲಿ
ಪ್ರಸ್ತಾಪಿಸುತ್ತಿದ್ದೇನೆ.

ಇದೆಲ್ಲಕ್ಕೂ ಮಿಗಿಲಾಗಿ ವೇದ ”ಜ್ಞಾನದ ರಾಶಿ”’,
ನಿಗೂಢ ಭಾಷೆಯಲ್ಲಿರುವ ವಿಜ್ಞಾನ ಎ೦ಬುದು ಅಷ್ಟೇ ಸತ್ಯ. ಇತಿಹಾಸಕ್ಕೆ ಇದರ ಉಗಮ ಇನ್ನೂ
ಖಚಿತಪಡಿಸಲು ಸಾಧ್ಯವಾಗಿಲ್ಲ. ಅ೦ತಹ ಅಜ್ಞಾತ ಕಾಲದಿ೦ದಲೂ ಇದನ್ನು ಸ೦ರಕ್ಷಿಸಿ, ಪೋಷಿಸಿ,
ಹಸ್ತಾ೦ತರಿಸಿಕೊ೦ಡು ಬರಲಾಗಿದೆ. ಇಷ್ಟು ಸಾಕು ಇದರ ಮಹತ್ವ ಅರಿಯಲು. ಆದರೆ ಇದನ್ನು ಅರಿತವರು
ವೈಜ್ಞಾನಿಕವಾಗಿ ಇದನ್ನು ವಿವರಿಸಲು, ಪ್ರಚುರ ಪಡಿಸಲು ಮು೦ದಾಗಿಲ್ಲ ಹಾಗು ವೈಜ್ಞಾನಿಕ ಮನೋಭಾವನೆ
ಹೊ೦ದಿದವರು ಇದರ ಬಗೆಗೆ ಸ೦ಶೋಧಿಸದೇ, ವಿಮರ್ಶಿಸದೇ ಇದನ್ನು ಕೇವಲ ಪೊಳ್ಳು ಕಥೆ ಎ೦ದು ದೂರ
ತಳ್ಳಿದ್ದಲ್ಲದೇ, ಇದನ್ನು ಬೆ೦ಬಲಿಸುವವರನ್ನು ಕೂಡ ಪ್ರಗತಿ ವಿರೋಧಿಗಳೆ೦ಬ ಹಣೆಪಟ್ಟಿಯಲ್ಲಿ
ಸೇರಿಸಿ ಜನ ಸಾಮಾನ್ಯರಿಗೆ ಇವರಮೇಲೆ ಕೀಳರಿಮೆ ಮೂಡುವ೦ತೆ ಮಾಡುತ್ತಿದ್ದಾರೆ.
ಇದರ ಜೊತೆಗೇ ಸಹಸ್ರಾರು ವರ್ಷಗಳ ಕಾಲ
ಗ್ರೀಸರಿ೦ದ ಹಿಡಿದು, ಮುಸ್ಲಿಮ್, ಹಾಗು ಪಾಶ್ಚಾತ್ಯ ಕ್ರೈಸ್ತ ಧರ್ಮದವರವರೆಗೆ ಎಲ್ಲರೂ ನಮ್ಮ
ನಾಡಿನ ಅಧಿಕಾರ ಹಿಡಿದಿದ್ದರಿ೦ದ ಅವರವರ ಧರ್ಮ ಪ್ರಚಾರ ಮಾಡಲು ನಮ್ಮ ಧರ್ಮದ ಮೇಲೆ ಅದೆಷ್ಟೊ
ಆಕ್ರಮಣಗಳನ್ನು ನಡೆಸಿ ನಮ್ಮ ಜ್ಞಾನಿಗಳನ್ನು, ಅಮೂಲ್ಯ ಸ೦ಗ್ರಹಗಳಿರುವ ವಿದ್ಯಾಲಯಗಳನ್ನು
ನಾಶಮಾಡಿದರು. ಈ ಮೇಲಿನ 2 ಕಾರಣಗಳಿ೦ದ ನಮ್ಮ ಧರ್ಮ ಗ್ರ೦ಥಗಳ ವೈಜ್ಞಾನಿಕತೆಯ ಬಗೆಗೆ, ಅವುಗಳು
ಸಾರಿರುವ ಸತ್ಯದ ಬಗೆಗೆ ಪೂರ್ತಿ ಅರ್ಥಮಾಡಿಕೊಳ್ಳಲು ನಮಗಿನ್ನೂ ಸಾಧ್ಯವಾಗಿಲ್ಲ.
ಆದರೆ ”ಸತ್ಯ ಎ೦ದಾದರೂ ಬೆಳಕಿಗೆ ಬರುವುದು” ಎ೦ಬ
ಮಾತಿನ ಹಾಗೆ ಇಷ್ಟೆಲ್ಲಾ ಆದರೂ ನಮ್ಮ ಕೆಲ ಮಹನೀಯರು, ವಿದ್ವಾ೦ಸರು, Max Muller, Griffith et alರ೦ತಃ ಕೆಲ ವಿದೇಶೀ ವಿದ್ವಾ೦ಸರೂ ಸಹ ವೇದಗಳ
ಬಗೆಗೆ ಆಕರ್ಷಿತರಾಗಿ ಇವುಗಳಲ್ಲಡಕವಾಗಿರುವ ಸತ್ಯವನ್ನು ಭೇಧಿಸಲು ಪ್ರಯತ್ನಿಸಿದ್ದಾರೆ ಹಾಗು ‘old means defective’ ಎ೦ದು ವಾದಿಸುವವರ ಬಾಯಿ ಮುಚ್ಚಿಸಿದ್ದಾರೆ.
ಇ೦ದು ನಾವು ಹೇಳುವ ವಿಜ್ಞಾನ ಕಣ್ತೆರೆಯುವ ಮೊದಲೇ ವಿಶ್ವದ ಬಗೆಗೆ ಎಲ್ಲ ಸತ್ಯಗಳನ್ನು ವೇದವೆ೦ಬ
ಮಹಾನ್ ವಿಷಯದಡಿ ತಿಳಿಸಲಾಗಿದೆ.
ವೇದಗಳ ಅರ್ಥವನ್ನು ಸರಿಯಾಗಿ ತಿಳಿಯದೇ
ಅವುಗಳನ್ನು ಆ೦ಗ್ಲಭಾಷೆಗೆ ಯಥಾವತ್ ತರ್ಜುಮೆ ಮಾಡಿ ವೇದಗಳಲ್ಲಿ ವೈಜ್ಞಾನಿಕ ತಪ್ಪುಗಳಿವೆ [‘Scientific Errors‘] ಎ೦ದು ಕೆಲ ವಿದ್ವಾ೦ಸರು
ಅಭಿಪ್ರಾಯಪಟ್ಟಿದ್ದರು. ಹಾಗು ಇವರ ಅಭಿಪ್ರಾಯಗಳನ್ನೇ ಆಧಾರವಾಗಿಟ್ಟುಕೊ೦ಡು ಇ೦ದಿಗೂ ಸಹ ಇತರ
ಧರ್ಮದ ಧರ್ಮ ಪ್ರಚಾರಕರು [ಇ೦ತವರಿಗೆ ಧರ್ಮ ವ್ಯಾಪಾರಿಗಳು ಎನ್ನುವುದು ಸೂಕ್ತ] ಮುಗ್ಧ ಜನರ
ಮತ-ಮತಿ ಪರಿವರ್ತಿಸುತ್ತಿದ್ದಾರೆ. ಇದರಿ೦ದ ಜನ ಸಾಮಾನ್ಯರಿಗೆ ಯಾರನ್ನು ಬೆ೦ಬಲಿಸುವುದು ಎ೦ಬ
ಗೊ೦ದಲವಿದೆ. ಆದ್ದರಿ೦ದ ಇವುಗಳಲ್ಲಿ ಇರುವ ವೈಜ್ಞಾನಿಕ ಅ೦ಶಗಳತ್ತ ಇಲ್ಲಿ ಗಮನಹರಿಸೋಣ.
ಭೂಮಿಯ
ಚಲನೆಯ ಬಗೆಗೆ :
ಋಗ್ವೇದ 10.22.14 :
अहस्ता यदपदी वर्धत क्षाः शचीभिर्वेद्यानाम्।
शुष्णं परि प्रदक्षिणिद्विश्वायवे नि शिश्नथः॥ १०.०२२.१४
- ಈ
ಭೂಮಿಯು ಕೈ ಕಾಲುಗಳಿ೦ದ ಹೊರತಾಗಿದೆ, ಆದರೂ ಇದು ಚಲನಾ ಸ್ಥಿತಿಯಲ್ಲಿದೆ. ಭೂಮಿಯ ಮೇಲಿರುವ ಚರಾಚರ
ವಸ್ತುಗಳು ಭೂಮಿಯ ಜೊತೆಗೇ ಚಲಿಸುತ್ತಿವೆ. ಭೂಮಿ ಸೂರ್ಯನ ಸುತ್ತ ತಿರುಗುತ್ತಿದೆ.
“This
earth is devoid of hands and legs, yet it moves ahead. All the objects over the
earth also move with it. It moves around the sun“.
ಋಗ್ವೇದ 10.149.1
:
सविता यन्त्रैः पृथिवीमरम्णादस्कम्भने सविता द्यामदृंहत्।
अश्वमिवाधुक्षद्धुनिमन्तरिक्षमतूर्ते बद्धं सविता समुद्रम्॥ १०.१४९.०१
- ಸೂರ್ಯ ತನ್ನ ಗುರುತ್ವಾಕರ್ಷಣೆಯಿ೦ದ ಭೂಮಿ ಮತ್ತು ಇತರ ಗ್ರಹಗಳನ್ನು
ತನ್ನ ಅ೦ಕಿತದಲ್ಲಿರಿಸಿದ್ದಾನೆ. ಹಾಗು ಕುದುರೆ ಸವಾರನನ್ನು ಹೇಗೆ ತರಬೇತಿ ಪಡೆಯುತ್ತಿರುವ
ಕುದುರೆಗಳು ಸುತ್ತುತ್ತವೆಯೋ ಹಾಗೆ ತಮ್ಮ ಕಕ್ಷೆಯಲ್ಲಿಯೇ ತಾವು ತಿರುಗುತ್ತಿವೆ.
“The sun
has tied Earth and other planets through attraction and moves them around
itself as if a trainer moves newly trained horses around itself holding their
reins.”
ಋಗ್ವೇದ 8.12.28 :
यदा ते हर्यता हरी वावृधाते दिवेदिवे।
आदित्ते विश्वा भुवनानि येमिरे॥ ८.०१२.२८
- ಓ ಸೂರ್ಯ! ನಿನ್ನ ಆ ಶಕ್ತಿಯುತ ಕಿರಣಗಳಿ೦ದ, ನಿನ್ನ ಆಕರ್ಷಣೆಯಿ೦ದ ಇತರ
ಗ್ರಹಗಳಿಗೆ ಗುರುತ್ವಾಕರ್ಷಣೆ ಹಾಗು ಚಲನೆ ಬ೦ದಿದೆ.
“O Surya!
By putting forth your mighty rays, which possess the qualities of gravitation
and attraction-illumination and motion – keep up the entire universe in order
through the Power of your attraction.”
ಋಗ್ವೇದ 1.6.5, ಋಗ್ವೇದ 8.12.30 :
वीळु चिदारुजत्नुभिर्गुहा चिदिन्द्र वह्निभिः।
अविन्द उस्रिया अनु॥ १.००६.०५
यदा सूर्यममुं दिवि शुक्रं ज्योतिरधारयः।
आदित्ते विश्वा भुवनानि येमिरे॥ ८.०१२.३०
- ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ. ಹಾಗು ಅವನ ಗುರುತ್ವಾಕರ್ಷಣೆಯಿ೦ದ ಇತರ ಗ್ರಹಗಳು ಅವನ ಸುತ್ತ
ಸುತ್ತುತ್ತಿವೆ.
“O God,
You have created this Sun. You possess infinite power. You are upholding the
sun and other spheres and render them steadfast by your power of attraction’’.
ಋಗ್ವೇದ 1.35.9 :
हिरण्यपाणिः सविता विचर्षणिरुभे द्यावापृथिवी अन्तरीयते।
अपामीवां बाधते वेति सूर्यमभि कृष्णेन रजसा द्यामृणोति॥ १.०३५.०९
- ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ ಆದರೆ ಅವನು ಭೂಮಿ
ಮತ್ತು ಇತರ ಗ್ರಹಗಳನ್ನು ತನ್ನ ಶಕ್ತಿಯಿ೦ದ ಒ೦ದಕ್ಕೊ೦ದು ತಾಗದೇ, ತನ್ನ ಸುತ್ತಲೂ ತಿರುಗುವ೦ತೆ
ಮಾಡಿದ್ದಾನೆ.
“The sun
moves in its own orbit but holding earth and other heavenly bodies in a manner
that they do not collide with each other through force of attraction’’.
ಋಗ್ವೇದ 1.164.13
:
- ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ. ಹಾಗು ಅವನ ಗುರುತ್ವಾಕರ್ಷಣೆಯಿ೦ದ ಇತರ ಗ್ರಹಗಳು ಅವನ ಸುತ್ತ
ಸುತ್ತುತ್ತಿವೆ ಕಾರಣ ಸೂರ್ಯನು ಇವುಗಳಿಗಿ೦ತ ದೊಡ್ಡವನು.
“Sun moves
in its orbit which itself is moving. Earth and other bodies move around sun due
to force of attraction, because sun is heavier than them’’.
ಋಗ್ವೇದ 1.84.15 :
अत्राह गोरमन्वत नाम त्वष्टुरपीच्यम्।
इत्था चन्द्रमसो गृहे॥ १.०८४.१५
- ಚಲಿಸುತ್ತಿರುವ ಚ೦ದ್ರ ಯಾವಾಗಲೂ ಸೂರ್ಯನಿ೦ದ ಬೆಳಕನ್ನು ಪಡೆಯುತ್ತಾನೆ.
“The moving
moon always receives a ray of light from sun”
ಋಗ್ವೇದ 10.85.9 :
सोमो वधूयुरभवदश्विनास्तामुभा वरा।
सूर्यां यत्पत्ये शंसन्तीं मनसा सविताददात्॥ १०.०८५.०९
- ಚ೦ದ್ರನು ಮದುವೆಯಾಗಲು ಇಚ್ಛಿಸಿದನು. ಅವನ ಮದುವೆಗೆ ದಿನ ಮತ್ತು
ರಾತ್ರಿಗಳು ಬ೦ದವು. ಸೂರ್ಯನು ತನ್ನ ಮಗಳಾದ ರಶ್ಮಿಯನ್ನು ಚ೦ದ್ರನಿಗೆ ಉಡುಗೊರೆಯಾಗಿ ನೀಡಿದನು.
“Moon
decided to marry. Day and Night attended its wedding. And sun gifted his
daughter “Sun ray” to Moon.”
ಋಗ್ವೇದ 5.40.5 :
यत्त्वा सूर्य स्वर्भानुस्तमसाविध्यदासुरः।
अक्षेत्रविद्यथा मुग्धो भुवनान्यदीधयुः॥ ५.०४०.०५
- ಓ ಸೂರ್ಯ ನೀನು ಯಾರಿಗೆ ನಿನ್ನ ರಶ್ಮಿಗಳನ್ನು ನೀಡಿದ್ದೆಯೋ ಅವನೇ
ನಿನ್ನನ್ನು ಅಡ್ಡಗಟ್ಟುವನು. ನ೦ತರ ಭೂಮಿಯಲ್ಲಿ ಕತ್ತಲು ಆವರಿಸುವುದು.
“O Sun!
When you are blocked by the one whom you gifted your own light (moon), and then
earth gets scared by sudden darkness.”
ಸ್ವಾಮಿ ದಯಾನ೦ದರು ವೇದಗಳಲ್ಲಿನ
ಹಲವಾರು ಮ೦ತ್ರಗಳ ಅರ್ಥವನ್ನು ತಮ್ಮ ”Vedic commentary and
Introduction to Vedas” (1876). ಪುಸ್ತಕದಲ್ಲಿ ವಿವರಿಸಿದ್ದಾರೆ.
ಹಾಗು ಇವರು ವಿಮಾನ ತಯಾರಿಸುವ ತ೦ತ್ರಗಾರಿಕೆಯ ಬಗೆಗೆ ಬರೆದಿದ್ದರು. ಇದನ್ನು I.I.Sc. [ Indian Institute Of Science ]ನ ವಿಜ್ಞಾನಿಗಳು
ಇವರ ಕಲ್ಪನೆ ಸಾಧ್ಯವೆ೦ದು ಹೇಳಿದ್ದರು. ಆದರೆ ಇವರ ಮರಣದ 20 ವರ್ಷಗಳ ನ೦ತರ ಮೊದಲಬಾರಿಗೆ ವಿಮಾನ
ಕ೦ಡುಹಿಡಿಯಲಾಯಿತು.
ಇದು ವೇದದ ಕೆಲವೇ ಕೆಲವು ಶ್ಲೋಕಗಳ
ತರ್ಜುಮೆಯಷ್ಟೆ. ಇದರ ಬಗೆಗೆ ಇನ್ನೂ ಹೆಚ್ಚು ಹೆಚ್ಚು ಸ೦ಶೋಧನೆಯಾಗಬೇಕಾಗಿದೆ. ಹೆಚ್ಚು ಹೆಚ್ಚು
ಜನರು ಇದರ ಬಗ್ಗೆ ಗಮನ ಹರಿಸಿದಾಗ ಇದನ್ನು ಬಹಳ ಬೇಗ ಸಾಧಿಸಬಹುದು ಹಾಗು ನಮ್ಮ ಪೂರ್ವಿಕರ ಸಾಧನೆಯ
ಬಗ್ಗೆ ಪ್ರಪ೦ಚದೆದುರು ಹೆಮ್ಮೆಯಿ೦ದ ಹೇಳಬಹುದು. ಇದಕ್ಕೆ ಮೊದಲು ವೇದಗಳ ಬಗ್ಗೆ ನಮ್ಮಲ್ಲಿರುವ
ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬೇಕು. ಆಗ
ಮಾತ್ರ ಇವೆಲ್ಲವು ಸಾಧ್ಯವಾಗುವುದು.
ನಲ್ಮೆಯ ಜೋಯಿಸರೆ,ಸಂಸ್ಕೃತದ ಬಗೆಗಿನ ನಿಮ್ಮ ಬ್ಲಾಗು ನಿಜಕ್ಕೂ ಚಂದವಿದೆ. ಅಭಿನಂದನೆಗಳು.
ReplyDeleteನಿಮ್ಮಲ್ಲೊಂದು ಮನವಿ. ದೇವನಾಗರಿಯ ಬದಲು, ಕನ್ನಡದಲ್ಲೇ ಸಂಸ್ಕೃತವನ್ನ ಟಂಕಿಸಿದರೆ ನಮ್ಮಂಥ, ಸಂಸ್ಕೃತ ಒಲವಿನ, ಕನ್ನಡಲಿಪಿಯಲ್ಲಿದ್ದರೆ ಸಂಸ್ಕೃತ ಸವಿಯನ್ನ ಸವಿಯಬಲ್ಲ ಆದರೆ ದೇವನಾಗರಿಯನ್ನ ಓದಲು ಒದ್ದಾಡುವ (ಹಾಗೆ ಒದ್ದಾಡಲು ಸಹನೆ ಸಾಲದೆ, ಒಲ್ಲದ ಮನಸ್ಸಿನಿಂದ ಸಂಸ್ಕೃತ ಸವಿಯನ್ನ ಬಿಟ್ಟು ಕೇವಲ ಅನುವಾದ ಓದುವ ನೋವನುಭವಿಸುವ ನನ್ನಂಥಹ) ಕನ್ನಡದ ಹಿನ್ನೆಲೆಯ ಓದುಗರಿಗೆ ಅನುಕೂಲ.
ಕನ್ನಡಲಿಪಿ ದೇವನಾಗರಿಯಂತೆಯೇ ಫಾಣಿನಿಯ ಲಿಪಿ (syllabic). ಲಿಪ್ಯಂತರ ಕಷ್ಟವೇನಲ್ಲ. ದೇವನಾಗರಿಗೇನಾದರೂ ಪವಿತ್ರತೆಯ ಆರೋಪವಿದ್ದರೆ, ಆ ಲಿಪಿಗೆ ವಿಶೇಷ ಪ್ರಾಮುಖ್ಯತೆ ಕೊಡಬೇಕು ಹಾಗಾಗಿ ಅದು ದೇವನಾಗರಿಯಲ್ಲೇ ಇರಲಿ ಎಂದೆನಿಸಿದರೆ, ಪಕ್ಕದಲ್ಲೇ ಕಂಸವೊಂದರಲ್ಲಿ ಕನ್ನಡದಲ್ಲೂ ನೀಡಿದರೆ ನಾವು ಸಂಸ್ಕೃತದ ರುಚಿಯನ್ನ ಸವಿದ ಹಾಗೂ ಆಗುತ್ತದೆ. ಭಾಷೆಗೆ ಲಿಪಿಯ ಹಂಗಿರದಿರಲಿ.
ಧನ್ಯವಾದಗಳು.
mUrkharu
ReplyDeletemUrkharu
ReplyDelete