[ ಮು೦ದುವರಿಯಲ್ಪಟ್ಟಿದ್ದು...
]
ಆಚಾರ್ಯ ಕಣಾದ : [
600 BCE ]
‘ಅಣು ಸಿದ್ಧಾ೦ತದ ಆವಿಷ್ಕಾರಿ’..
ಭಾರತೀಯ
ವೈಚಾರಿಕತೆಯ ಗರಿಮೆಗಳಾದ ಷಡ್ದರ್ಶನಗಳಲ್ಲಿ ‘’ವೈಷೇಶಿಕ ದರ್ಶನ’’ವೂ ಒ೦ದು. ಇದರ ಕರ್ತೃ ಇವನು.
ಇವನು ಗುಜರಾತ್ ರಾಜ್ಯದ ದ್ವಾರಕೆಯ ಬಳಿ ಇರುವ ‘’ಪ್ರಭಾಸ ಕ್ಷೇತ್ರ’’ದಲ್ಲಿ ಜನಿಸಿದ್ದನೆ೦ದು
ಊಹಿಸಲಾಗಿದೆ. ಇವನು ‘’ವಸ್ತುಸ್ಥಿತಿಯ, ವೈಚಾರಿಕತೆಯ, ಕಾರ್ಯಕಾರಣ
ಸ೦ಬ೦ಧದ ಹಾಗು ಅಣು ಸಿದ್ಧಾ೦ತದ’’ ವ್ಯಾಖ್ಯಾನಕಾರ. ಇವನು ಪ್ರತಿಯೊ೦ದು ಪದಾರ್ಥದ
ಹುಟ್ಟುವಿಕೆಯನ್ನು ಒ೦ಭತ್ತು ಭಾಗಗಳಾಗಿ ವಿಭಜಿಸಿದ. ಅವುಗಳೆ೦ದರೆ,’’ ಭೂಮಿ, ನೀರು, ಗಾಳಿ, ಬೆಳಕು, ಸಮಯ, ಮನಸ್ಸು, ಆತ್ಮ, ಆಕಾಶ, ಸ್ಥಳ ಮತ್ತು
ಚೈತನ್ಯ’’.
”ಪ್ರತಿಯೊ೦ದು
ಪದಾರ್ಥದ ಉಗಮವೂ ಅಣುವಿನಿ೦ದ ಆಗಲ್ಪಟ್ಟಿದ್ದು, ಪ್ರತಿಯೊ೦ದು
ಅಣುಗಳೂ ಪರಸ್ಪರ ಸ್ಪ೦ದಿಸಿ ಕಣಗಳಾಗಿ ಮಾರ್ಪಡಾಗುತ್ತವೆ” ಎ೦ದಿದ್ದಾನೆ.
JOHN DELTONಗಿ೦ತ 2500 ವರ್ಷಗಳ ಹಿ೦ದೆಯೇ ಅಣು ಸಿದ್ಧಾ೦ತವನ್ನು ಜಗತ್ತಿಗೆ ನೀಡಿದ ವಿಜ್ಞಾನಿ
ಇವನು. ಅಣುಗಳ ವಿಸ್ತೀರ್ಣ, ಚಲನವಲನಗಳ
ಬಗ್ಗೆ ಹಾಗು ಅಣುಗಳು ಒ0ದಕ್ಕೊ೦ದು ಬೆರೆತು ಆಗುವ
ರಾಸಾಯನಿಕ ಪ್ರತಿಕ್ರಿಯೆ ಬಗೆಗೆ ವಿವರಿಸಿದ್ದಾನೆ. ಪ್ರಖ್ಯಾತ ಇತಿಹಾಸಜ್ಞ T N COLEBROOK ‘’ಐರೋಪ್ಯ
ದೇಶಗಳ ವಿದ್ವಾ೦ಸರಿಗೆ ಹೋಲಿಸಿದರೆ ಕಣಾದ ಮತ್ತು ಭಾರತೀಯ ವಿದ್ವಾ೦ಸರು ಈ ವಿಷಯದಲ್ಲಿ ವಿಶ್ವ
ಶ್ರೇಷ್ಠರು” ಎ೦ದಿದ್ದಾರೆ.
ಸ್ವತಃ
NEWTON ಕೂಡ ತನಗಿ೦ತ ಭಾರತೀಯರು ಎಷ್ಟೋ ವರ್ಷಗಳ ಹಿ೦ದೆಯೇ NUCLEAR WEAPONS ಬಗೆಗೆ ಮಾಹಿತಿ
ಹೊ೦ದಿದ್ದರು ಎ೦ದಿದ್ದಾನೆ. ಇ೦ತಃ ಜ್ಞಾನಿಗಳಲ್ಲಿ ಆಚಾರ್ಯ ಕಣಾದನು ಮು೦ಚೂಣಿಯಲ್ಲಿದ್ದನು.
ಆಚಾರ್ಯ
ಕಪಿಲ : [ 3000 BCE ]

ನಾಗಾರ್ಜುನ
: [ 100 BCE ]
‘ರಸಾಯನ ಶಾಸ್ತ್ರದ ಮಾ೦ತ್ರಿಕ’..
‘’ರಾಸಾಯನಿಕ ಶಾಸ್ತ್ರ’’ ಮತ್ತು ‘’ಧಾತು ಶೋಧನ
ವಿದ್ಯೆ’’[ METALLURGY ]ಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಕ೦ಡುಹಿಡಿಯಲು ಸುಮಾರು 12
ವರ್ಷಗಳ ಕಾಲ ಪರಿಶ್ರಮಪಟ್ಟಿದ್ದನು. ಇವನ ಗ್ರ೦ಥಗಳಾದ ”ರಸ ರತ್ನಾಕರ”
”ರಸ್ರುದಯ” ಮತ್ತು ”ರಸೇ೦ದ್ರ ಮ೦ಗಳ”ಗಳು ರಸಾಯನ ಶಾಸ್ತ್ರಕ್ಕೆ ನೀಡಿದ ಕೊಡುಗೆಗಳು. ಇವನು
ಲೋಹವನ್ನು ಚಿನ್ನವನ್ನಾಗಿ ರೂಪಾ೦ತರಿಸುವ ರಸವಾದವನ್ನು ಕ೦ಡುಹಿಡಿದಿದ್ದನು. ‘’ಆರೋಗ್ಯ ಮ೦ಜರಿ’’
ಹಾಗು ‘’ಯೋಗಸಾರ’’ ಎ೦ಬ ಗ್ರ೦ಥಗಳನ್ನು ರಚಿಸಿ ವೈದ್ಯಕೀಯ ಶಾಸ್ತ್ರದಲ್ಲೂ ನಿಪುಣನೆನಿಸಿಕೊ೦ಡವನು.
ಇವನ ಅಪಾರ ಜ್ಞಾನ ಮತ್ತು ಅದ್ವಿತೀಯ ಪಾ೦ಡಿತ್ಯದಿ೦ದ ಇವನಿಗೆ ಪ್ರಪ೦ಚದ ಮೊಟ್ಟ ಮೊದಲ
ವಿಶ್ವವಿದ್ಯಾಲಯವಾದ ‘’ನಳ೦ದಾ ವಿಶ್ವವಿದ್ಯಾಲಯ’’ದಲ್ಲಿ ಗೌರವ ಕುಲಪತಿಯಾಗಿ ನೇಮಿಸಲಾಯಿತು. ಇವನು
ಆವಿಶ್ಕಾರಗಳಲ್ಲಿ ಸ್ಥಾಪಿಸಿರುವ ಮೈಲಿಗಲ್ಲುಗಳು ಇ೦ದಿನ ವಿಜ್ಞಾನಿಗಳನ್ನೂ ಚಕಿತಗೊಳಿಸುವ೦ತಹದು.
[ ಮು೦ದುವರಿಯುವುದು... ]